ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ನಲ್ಲಿ ಮೇ. ೨೫ರಂದು ಶಿಕ್ಷಕರಿಗೆ ಜೀವನ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಸಿಬಿಎಸ್ಇ ಮಾರ್ಗದರ್ಶನದಲ್ಲಿ ನೀಡಲಾಯಿತು. ತರಬೇತುದಾರರಾಗಿ ಎಂ.ವಿ.ಜೆ ಅಂತರ ರಾಷ್ಟ್ರಿಯ ಶಾಲೆ ಮಾರ್ತಹಳ್ಳಿ, ಬೆಂಗಳೂರು ಇಲ್ಲಿಯ ಪ್ರಾಂಶುಪಾಲರಾದ ಶ್ರೀಮತಿ ವಂಶಿಪ್ರಿಯಾ ಅಮರ ಅವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲರಾದ ಕು. ದೇಚಮ್ಮ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಆಯೋಜಿತ ಶಾಲೆಯ ೩೨ ಶಿಕ್ಷಕರು ಹಾಗೂ ಅಂಬಿಕಾ ವಿದ್ಯಾಲಯ ಪುತ್ತೂರು ಇಲ್ಲಿಯ ೨೨ ಶಿಕ್ಷಕರು ತರಬೇತಿ ಪಡೆದುಕೊಂಡರು. ವಿವಿಧ ರೀತಿಯ ಚಟುವಟಿಕೆಗಳ ಮೂಲಕ ಜೀವನ ಕೌಶಲ್ಯ ಕಾರ್ಯಗಾರವು ದಿನಪೂರ್ತಿ ಉತ್ಸಾಹದಿಂದ ಜರುಗಿತು.