ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಇಲ್ಲಿನ ರೋವರ್ಸ್ ರೇಂಜರ್ಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಆಶ್ರಯದಲ್ಲಿ ಕಾಲೇಜಿನ ರೋವರ್ಸ್ ವಿದ್ಯಾರ್ಥಿಗಳಿಗೆ ನಾಲ್ಕುದಿನಗಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮೇ. ರಂದು ಜರಗಿತು .
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಸ್ಕೌಟ್ ಮಾಸ್ಟರ್ ಸತೀಶ್ ಹಾಗೂ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಸ್ಮಿತಾ ಅವರು ದೀಪ ಬೆಳಗುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ದೀನೇಶ ಪಿ. ಟಿ.
ರವರು ಅಧ್ಯಕ್ಷತೆಯನ್ನು ವಹಿಸಿಕೊಂಡರು ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಶ್ರೀ ಮನೋಹರ್ ಹಾಗೂ ರಾಮ್ ಪ್ರಸಾದ್ ,ರೇಂಜರ್ ಲೀಡರ್ ಗಳಾದ ಶ್ರೀಮತಿ ಪ್ರಮೀಳಾ ಶ್ರೀಮತಿ ಅಶ್ವಿನಿ ಉಪಸ್ಥಿತರಿದ್ದರು. ರೋವರ್ಸ್ ಹಾಗೂ ರೇಂಜರ್ಸ್ ವಿದ್ಯಾರ್ಥಿ ನಾಯಕರಾದ ಭರತ್ ಹನುಮೇಶ್ ದೀಕ್ಷಾ ಸಹಕರಿಸಿದರು.
ಮೇಘನಾ ನಿರೂಪಿಸಿ, ಭರತ್ ಸ್ವಾಗತಿಸಿ, ವಂದಿಸಿದರು. ಸುಮಾರು 60ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದರು.