ಶಾಲೆಯ ಬೆಳವಣಿಗೆಗೆ ಊರವರ ಸಹಭಾಗಿತ್ವ ಅಗತ್ಯ : ಜಗನ್ನಾಥ ಪೂಜಾರಿ ಮುಕ್ಕೂರು
ಸರಕಾರಿ ಶಾಲೆಯ ಉನ್ನತಿಯಲ್ಲಿ ಊರವರ ಸಹಭಾಗಿತ್ವ ಅತಿ ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಿಸಿರುವುದು ಮಾದರಿ ಕಾರ್ಯ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.
ಮುಕ್ಕೂರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳು ಕೊಡ ಮಾಡಿದ ಕಲಿಕಾ ಸಾಮಗ್ರಿಗಳನ್ನು ಮೇ 26 ರಂದು ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಉದ್ದೀಪನಕ್ಕೆ ಪೂರಕ ಕಾರ್ಯ ಇದಾಗಿದೆ. ದಾನಿಗಳ ಕೊಡುಗೆಯನ್ನು ವಿದ್ಯಾರ್ಥಿಗಳು ಸ್ಮರಿಸಿಕೊಂಡು ಕಲಿಕಾ ಸಾಮಗ್ರಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
*ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ,* ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕಲಿಕೆಗೆ ಆರ್ಥಿಕ ಸಮಸ್ಯೆಗಳು ಇತ್ತು. ಈಗ ಎಲ್ಲ ವ್ಯವಸ್ಥೆಗಳು ಇದೆ. ವಿದ್ಯಾರ್ಥಿ ಹಿತಕ್ಕೆ ಪೂರಕವಾಗಿ ಸ್ಪಂದಿಸುವವರಿದ್ದಾರೆ. ಹೀಗಾಗಿ ಈ ಎಲ್ಲ ಅವಕಾಶಗಳನ್ನು ಮಕ್ಕಳು ಬಳಸಿಕೊಂಡು ಸಾಧನೆ ತೋರಬೇಕು ಎಂದರು.
*ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ,* ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಪಡೆದು ಉದ್ಯೋಗ ಸಿಕ್ಕ ಮೇಲೆ ಇಂತಹ ಸಹಕಾರ ಮನೋಭಾವ ಬೆಳೆಸಿಕೊಳ್ಳಲು ಈ ಕಾರ್ಯಕ್ರಮ ಸ್ಪೂರ್ತಿ ಆಗಬೇಕು. ಉತ್ತಮ ಅಭ್ಯಾಸದ ಮೂಲಕ ಉನ್ನತ ಸ್ಥಾನಮಾನ ಗಳಿಸಿ ಶಾಲೆಗೆ ಊರಿಗೆ ಕೀರ್ತಿ ತರಬೇಕು ಎಂದರು.
*ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ, ಶಾಲಾ ಹಿತ ಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಶಾಲಾ ಮುಖ್ಯಗುರು ವಸಂತಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ಪ್ರಗತಿಪರ ಕೃಷಿಕ ಯಶವಂತ ಕಾನಾವುಜಾಲು ಉಪಸ್ಥಿತರಿದ್ದರು.* ಶಿಕ್ಷಕಿ ಲತಾ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ವಂದಿಸಿದರು. ಶಿಕ್ಷಕ ಶಶಿಕುಮಾರ್ ಬಿ.ಎನ್.ನಿರೂಪಿಸಿದರು.
*ದಾನಿಗಳ ಕೊಡುಗೆ*
*ದಿವಂಗತ ಮೋನಪ್ಪ ಗೌಡ ಕೂರೋಡಿ ಸ್ಮರಣಾರ್ಥ ಬರವಣಿಗೆ ಪುಸ್ತಕ, ಪೆನ್ನು., ದಿವಂಗತ ವಿಠಲ ಗೌಡ ಕಾನಾವುಜಾಲು ಸ್ಮರಣಾರ್ಥ ಜಾಮಿಟ್ರಿ ಬಾಕ್ಸ್ ಮತ್ತು ಪುಸ್ತಕ., ಆಳ್ವಫಾರ್ಮ್ಸ್ ನ ಧನುಷ್ ಆಳ್ವ ನೀಡಿರುವ ಬರವಣಿಗೆ ಪುಸ್ತಕ, ಪೆನ್ನು., ಮಹೇಶ್ ಕುಂಡಡ್ಕ ಕುವೈತ್ ನೀಡಿರುವ ಪುಸ್ತಕ ಸೇರಿದಂತೆ ವಿವಿಧ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಪ್ರತಿ ವಿದ್ಯಾರ್ಥಿಗೆ ದಾನಿಗಳ ಸಹಭಾಗಿತ್ವದಲ್ಲಿ ಪ್ರತಿ ವಿದ್ಯಾರ್ಥಿಗೆ ಕಲಿಕೆಗೆ ಬೇಕಾದ ಬರವಣಿಗೆ ಪುಸ್ತಕ, ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಸಹಿತ ಎಲ್ಲ ಅವಶ್ಯಕತೆಗಳನ್ನು ಉಚಿತ ರೂಪದಲ್ಲಿ ನೀಡಲಾಯಿತು.*