ಬೆಳ್ಳಾರೆಯ ಗೌರಿಹೊಳೆಯ ಪಕ್ಕದ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಚಿತ್ರಕೂಟ ಸಹಿತ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮ ಮೇ. 26ಮತ್ತು 27ರಂದು ಕುನ್ನತ್ತಿಲ್ ಶ್ರೀ ಮುರಳೀಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಮೇ. 26ರಂದು ತಂತ್ರಿಗಳ ಆಗಮನದ ಬಳಿಕ ಪುಣ್ಯಾಹ, ಪ್ರಾಸಾದ ಶುದ್ಧಿ, ಚಿನ್ನದ ನಾಗಬಿಂಬ ಜಲಾಧಿವಾಸ ಸೇರಿದಂತೆ ವಿವಿಧ ವೈದಿಕ ಕಾರ್ಯಗಳು ನಡೆಯಿತು. ಮೇ. 27ರಂದು ಬೆಳಿಗ್ಗೆ 6.00 ಗಂಟೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಪೂ. 9.30ರ ನಂತರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ ಚಿತ್ರಕೂಟ ಪ್ರತಿಷ್ಠೆ, ನಾಗಬ್ರಹ್ಮ, ನಾಗರಾಜ, ವೀಣಾಪಾಣಿ ನಾಗಕನ್ನಿಕೆಯ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು, ಪ್ರದಾನ ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್. ಬಂಡಿಮಜಲು, ಖಜಾಂಜಿ ಆನಂದ ಗೌಡ ಪಡ್ಪು ಟ್ರಸ್ಟ್ನ ನಿರ್ದೇಶಕರು, ಹಿರಿಯ ಸಲಹಾ ಸಮಿತಿ ಸದಸ್ಯರು, ಸದಸ್ಯರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.