ವಾಹನ ಸವಾರರ ಪರದಾಟ
ಜಯನಗರ 19 ನೇ ವಾರ್ಡಿನಲ್ಲಿ ಅಪರ್ಣಾ ಇಂಡಸ್ಟ್ರೀಸ್ ಬಳಿ ನಗರ ಪಂಚಾಯತ್ ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣ ಕ್ಕೆ ಕಾಮಗಾರಿ ಕಳೆದ ಕೆಲವು ದಿನಗಳ ಹಿಂದೆ ನಡೆಯಿತು.
ಕಾಮಗಾರಿಯ ಸಂದರ್ಭ ಜಯನಗರ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಜಲ್ಲಿ ಮತ್ತು ಹೊಯಿಗೆಯನ್ನು ತಂದು ಹಾಕಿ ಕಾಂಕ್ರೀಟಿಕರಣ ಗೊಳಿಸುವ ಮಿಕ್ಸಿಂಗ್ ಕಾರ್ಯ ನಡುರಸ್ತೆಯಲ್ಲೇ ನಡೆಯುತ್ತಿದ್ದವು. ಇದರಿಂದ ಈ ಭಾಗದ ಸವಾರರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಾಮಗಾರಿ ನಡೆದ ನಂತರ ಈ ಸಮಸ್ಯೆ ಸರಿಯಾಗಬಹುದೆಂದು ಬಯಸಿದ್ದ ಸ್ಥಳೀಯ ಜನತೆಗೆ ಮಾತ್ರ ಇನ್ನೂ ಕೂಡ ಸಮಸ್ಯೆಯಿಂದ ಪರಿಹಾರ ಸಿಗಲಿಲ್ಲ.
ರಸ್ತೆ ಕಾಮಗಾರಿ ಕಳೆದು ವಾರವೇ ಕಳೆದರು ಉಳಿದ ಸಾಮಾಗ್ರಿಗಳು ರಸ್ತೆ ಮಧ್ಯದಲ್ಲಿ ಹರಡಿದ್ದು ದ್ವಿಚಕ್ರ ವಾಹನ ಸವಾರರು ಜೀವ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ನಗರ ಪಂಚಾಯತ್ ಸದಸ್ಯರು ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.