ಬಳ್ಪ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳ ಪೋಷಕರು ವಿವಿಧ ಕೊಡುಗೆಗಳನ್ನು ನೀಡಿದರು. ಸ್ಲೇಟ್ ಹಾಗು ಕಡ್ಡಿ ಬಾಕ್ಸ್ ನ್ನು ಬಾಲವಿಕಾಸ ಸಮಿತಿಯ
ಉಪಾಧ್ಯಕ್ಷ ಚಂದ್ರ ಕಾಂತ್ ಎಂ. ಎಂ, 5 ಲೀ. ಕುಕ್ಕರನ್ನು ತನುಜಾ ಸಂಜಯ್ ಗುಡ್ಡೆಮನೆ,
ಸ್ಟೀಲ್ ಬಕೆಟನ್ನು ಹರೀಶ್ ಆಲ್ಕಬೆ, ಸ್ಟೀಲ್ ಮಡಿಕೆಯನ್ನು ದೀಪಿಕಾ ಜಗನಾಥ್ ಉಕ್ಕಿನಮನೆ, ಹಾಗೂ ಸ್ಟೀಲಿನ ನೀರಿನ ಫಿಲ್ಟರನ್ನು ಪಂಜ ಲಯನ್ಸ್ ಕ್ಲಬ್ಬಿನ ವತಿಯಿಂದ ಕರುಣಾಕರ ಎಣ್ಣೆಮಜಲು ಇವರುಗಳು ಕೊಡುಗೆ ಯಾಗಿ ನೀಡಿದರು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪರಮೇಶ್ವರಿ ಜತ್ತಿಲ ಹಾಗೂ ಸದಸ್ಯರು ಉಪಸ್ಥಿತರಿದ್ದರು.