ಸಹಕಾರ ಸಂಘಗಳ ಜಂಟಿ ನಿಬಂಧಕರು ಮೈಸೂರು ಪ್ರಾಂತ ಡಾ.ಜೆ. ಉಮೇಶ್ ರವರು ಮೇ.26ರಂದು ಸುಳ್ಯ ವೆಂಕಟರಮಣ ಸೊಸೈಟಿ ಗೆ ಭೇಟಿ ನೀಡಿ ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಥಮ ಬಾರಿಗೆ ಭೇಟಿ ನೀಡಿದ ಜಂಟಿ ನಿಬಂಧಕರನ್ನು ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮರು ಗೌರವಿಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ಸಿ.ಸದಾನಂದ ಕುರುಂಜಿ,ಪಿ.ಎಸ್.ಗಂಗಾಧರ್, ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ, ಮೈಸೂರು ಜಂಟಿ ನಿಬಂಧಕರ ಕಚೇರಿಯ ಸಿ.ಡಿ.ಒ.ಭರತ್,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ಜಿ.ಎಂ.ಚಂದ್ರಶೇಖರ, ಎ.ಜಿ.ಎಂ.ಮನೋಜ್ ಪಾನತ್ತಿಲ,ಸಿಬ್ಬಂದಿಗಳಾದ ಕಾರ್ತಿಕ್ ಹಾಗೂ ಸುರೇಶ್ ಎಂ.ಉಪಸ್ಥಿತರಿದ್ದರು.