ಗಾಂಧಿನಗರ ಶಾಖೆಯು ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ನೀಡುವ ಪುಸ್ತಕ ಹಾಗೂ ಕೊಡೆ ವಿತರಣೆ ಸುನ್ನೀ ಸೆಂಟರ್ ಅನ್ಸಾರ್ ಕಾಂಪ್ಲೆಕ್ಸ್ ಗಾಂಧಿನಗರದಲ್ಲಿ ಯುನಿಟ್ ಅಧ್ಯಕ್ಷ ಆಬಿದ್ ಕಲ್ಲುಮುಟ್ಳು ರವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮ ದುವಾ ಉದ್ಘಾಟನೆಯನ್ನು SYS ಸೆಂಟರ್ ಸದಸ್ಯರಾದ ಅಬ್ದುಲ್ಲಾ ಸಖಾಫಿ ಫಾರೆ ನಿರ್ವಹಿಸಿದರು,ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅನ್ಸಾರುಲ್ ಮುಸ್ಳಿಮೀನ್ಅಸೋಸಿಯೇಷನ್ ಇದರ ಅಧ್ಯಕ್ಷರಾದ ಶುಕೂರ್ ಹಾಜಿ,ಎಸ್ ವೈ ಎಸ್ ಸುಳ್ಯ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕ್ಕಾರ್,ಬ್ರಾಂಚ್ ಕಾರ್ಯದರ್ಶಿ ಆರಿಸ್ ಸಿ.ಎ, ಡಿವಿಷನ್ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಬಿ ಎ, ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಳು,ಬ್ರಾಂಚ್ ಸದಸ್ಯರಾದ ಅಬೂಬಕ್ಕರ್ ವೈಟ್,ಮಹಮ್ಮದ್ ಗಾಂಧಿನಗರ,ಮುನೀರ್ ನಾವೂರು,ಕಬೀರ್ ಗಾಂಧಿನಗರ,ಅಶ್ರಪ್ ಬುಶ್ರ, ಹನೀಫ್ ಜಯನಗರ, ಯುನಿಟ್ ರೀಡ್ ಪ್ಳಸ್ ಕಾರ್ಯದರ್ಶಿ ಸ್ವಾದಿಕ್ ಅರಂಬೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ SSF ಸುಳ್ಯ ಡಿವಿಷನ್ ಕೋಶಾಧಿಕಾರಿ ನೌಶಾದ್ ಕೆರೆಮೂಲೆ ಸಮುದಾಯದ ವಿದ್ಯಾರ್ಥಿಗಳು ಲೌಕಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸ ದಲ್ಲಿ ಮುಂದೆ ಓದಿ ಉನ್ನತ ಮಟ್ಟದ ಸಾದನೆ ಮಾಡಿ ಸುನ್ನತ್ ಜಮಾಅತ್ ಆದರ್ಶ ವ್ಯಕ್ತಿಗಳಾಗಿ ನಮ್ಮ ಮಕ್ಕಳು ಬೆಳೆಯಬೇಕು ಎಂದು ಆಶಂಶಾ ಬಾಷಣ ಗೈದರು,
ಯುನಿಟ್ ಕಾರ್ಯದರ್ಶಿ ಆರಿಫ್ ಬುಶ್ರ ಸ್ವಾಗತಿಸಿ,ಯುನಿಟ್ ಕ್ಯಾಂಪಸ್ ಕಾರ್ಯದರ್ಶಿ ಸಲ್ಮಾನ್ ಫಾರಿಸ್ ನಾವೂರು ವಂದಿಸಿದರು.