ಇತ್ತೀಚೆಗೆ ಬಿಡುಗಡೆ ಗೊಂಡಿರುವ ತುಳು ರಾಜ್ ಸೌಂಡ್ಸ್ & ಲೈಟ್ಸ್ ಚಿತ್ರವು ಸುಳ್ಯದ ಚಿತ್ರ ಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಇದರ ಅಂಗವಾಗಿ ಚಿತ್ರ ತಂಡವು ಇಂದು ಮಧ್ಯಾಹ್ನ 12 ಗಂಟೆಗೆ ಸುಳ್ಯದ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಲಿರುವುದು. ಚಿತ್ರದ ನಿರ್ದೇಶಕರು, ನಿರ್ಮಾಪಕರು, ಹಾಸ್ಯ ನಟ ನವೀನ್ ಡಿ ಪಡೀಲ್ ಸೇರಿದಂತೆ ಇನ್ನಿತರ ಕಲಾವಿದರು ಭಾಗವಹಿಸಲಿದ್ದಾರೆ.