ಕೂತ್ಕುಂಜ ಗ್ರಾಮದ ಚಿದ್ಗಲ್ಲು ಬೈಲು ಅಟಲ್ ಜೀ ಕ್ರೀಡಾಂಗಣದ ಬಳಿ ರಾಷ್ಟ್ರೀಯ ಜಲಜೀವನ ಮಿಶನ್ ಮನೆ-ಮನೆಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಗುದ್ದಲಿ ಪೂಜೆ ಮತ್ತು ಗ್ರಾಮ ಪಂಚಾಯತ್ ಸ್ವಂತ ನಿಧಿಯ ಮೂಲಕ ಕಾಂಕ್ರೀಟ್ ಕರಣ ಗೊಂಡ ಕುಳ್ಳಾಜೆ – ಹೆಬ್ಬಾರಹಿತ್ಲು 70 ಮೀಟರ್ ರಸ್ತೆಯ ಉದ್ಘಾಟನೆ ಮೇ.27 ರಂದು ಜರುಗಿತು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ರಚನೆಗೆ ಗುದ್ದಲಿ ಪೂಜೆಯನ್ನು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ನೆರವೇರಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.
ವೆಂಕಟೇಶ್ವರ ಜೋಯಿಸ ಹೆಬ್ಬಾರಹಿತ್ಲು ತೆಂಗಿನ ಕಾಯಿ ಒಡೆದರು. ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಸದಸ್ಯರಾದ ನಾರಾಯಣ ಕೃಷ್ಣನಗರ, ಚಂದ್ರಶೇಖರ ದೇರಾಜೆ, ಶ್ರೀಮತಿ ವೀಣಾ ಪಂಜ, ವಿಜಯಲಕ್ಷ್ಮಿ ಕಲ್ಕ,ಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಶಿವರಾಮಯ್ಯ ಕರ್ಮಜೆ, ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ,ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರ ಉಕೇಶ್, ಕಾಂಕ್ರೀಟ್ ರಸ್ತೆ ಗುತ್ತಿಗೆದಾರ ಲೋಹಿತ್ ಹುದ್ದೆಟ್ಟಿ , ಕೂತ್ಕುಂಜ ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು,ಧರ್ಮಪಾಲ ಗೌಡ ಕಕ್ಯಾನ, ತಿಮ್ಮಪ್ಪ ಗೌಡ ಕೂತ್ಕುಂಜ ಫಲಾನುಭವಿಗಳು, ಗ್ರಾಮಸ್ಥರು ,ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ಸ್ವಾಗತಿಸಿ ,ವಂದಿಸಿದರು