ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳ್ಪ ಇಲ್ಲಿ ಇತಿಹಾಸದ ಹಬ್ಬವನ್ನು ಆಚರಿಸಲಾಯಿತು.
ಸರ್ಕಾರದ ಕಾರ್ಯಕ್ರಮವಾದ ಮಳೆಬಿಲ್ಲು ಇದರ ಹನ್ನೊಂದನೆಯ ದಿನದ ಇತಿಹಾಸದ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕಾವ್ಯ ಸಂಜನ ರಕ್ಷಾ ಭಾಗ್ಯಶ್ರೀ ಅಕ್ಷಯ್ ಕೃತೇಶ್ ಶಿಲ್ಪ ರಿತ್ವಿಕ್, ವೃಂದ ಪೂಜಾ ಪೂರ್ವಿತ್ ಧನ್ವಿ ಸಾತ್ವಿ ನಿತ್ವಿಕ, ಇಂಚರ, ಕಿಶನ್, ಹಾಗೂ ಶಿಕ್ಷಕರಾದ ಆನಂದ ವೈ ಈ ಮತ್ತು ಲೋಲಾಕ್ಷಿ ಎಂ ಇವರು ಪ್ರಾಚೀನ ವಸ್ತುಗಳಾದ ನಾಣ್ಯಗಳು ನೋಟುಗಳು ಪಾತ್ರೆಗಳು, ನೊಗ ಗ್ಯಾಸ್ ಲೈಟ್ ಸೌಟು, ಗ್ಲಾಸ್, ಕುಡುಗೋಲು. ಒನಕೆ, ಚನ್ನೆಮಣೆ, ಗಂಟೆ,ಮಜ್ಜಿಗೆ ಮಾಡುವ ಯಂತ್ರ, ಸೇರು , ಪಾವು, ಕುಕ್ಕೆ, ಚಂಬು,ಲೋಹದ ಪಾತ್ರೆಗಳು, ಮೀನು ಹಿಡಿಯುವ ಕುಕ್ಕೆ ಮುಂತಾದ ಪರಿಕರಗಳನ್ನು ತಂದು ಪ್ರದರ್ಶಿಸಲಾಯಿತು ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಕೆ ಮತ್ತು ಪೋಷಕರಾದ ಶಶಿಕಲಾ ನೆರವೇರಿಸಿದರು ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಸಿಬ್ಬಂದಿ ವರ್ಗದವರಾದ ಶ್ರೀಮತಿ ಭಾಗೀರಥಿ ಎನ್,ಶ್ರೀಮತಿ ಗುಲಾಬಿ ಎ ಶ್ರೀಮತಿ ಮೋಹಿನಿ ಬಿ ಕೆ ಶ್ರೀಮತಿ ಲೋಲಾಕ್ಷಿ ಎಂ ಶ್ರೀಮತಿ ಹರ್ಷಿತ ಹಾಗೂ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು ವಸ್ತುಪ್ರದರ್ಶನವನ್ನು ಗ್ರಾಮಸ್ಥರು ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ವೀಕ್ಷಿಸಿದರು ಶಾಲಾ ಶಿಕ್ಷಕ ಆನಂದ ವೈ .ಈ ಇವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು ಹಾಗೂ ವಿದ್ಯಾರ್ಥಿಗಳು ತಾವು ತಂದಿದ್ದ ಪರಿಕರಗಳ ಬಗ್ಗೆ ಮಾಹಿತಿ ನೀಡಿದರು.