ಜನರ ಪ್ರಾಣ ರಕ್ಷಿಸಿ
ಜಾಲ್ಸೂರು ಸುಬ್ರಮಣ್ಯ ರಸ್ತೆಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಕಂದ್ರಪ್ಪಾಡಿ ರಸ್ತೆಯು ಸೇರುವಲ್ಲಿ ಹೆದ್ದಾರಿಯ ಹುಲ್ಲುಕುಮೇರಿ ಎಂಬಲ್ಲಿ ಹೆದ್ದಾರಿ ಬದಿ ತಿರುವೊಂದು ಇದ್ದು, ಎದುರು ಬದರು ಬರುವ ವಾಹನಗಳು ಪರಸ್ಪರ ಗೋಚರಿಸದೆ ಅಪಘಾತವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇನ್ನಿತರ ಘನವಾಹನಗಳು ಅಪಘಾತಗಳು ಆಗಿವೆ.
ಅಲ್ಲದೆ ಇಲ್ಲಿ ಒಂದು ಬಸ್ಸು ತಂಗುದಾಣವಿದ್ದು ಇಲ್ಲಿ ಶಾಲಾ ಮಕ್ಕಳು ಸೇರಿದಂತೆ ಇನ್ನಿತರರು ವಾಹನಗಳಿಗಾಗಿ ಕಾದು ನಿಂತಿರುತ್ತಾರೆ. ಇವರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ನಿಲ್ಲುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಹೆದ್ದಾರಿ ಇಲಾಖೆಯವರು ಈ ಒಂದು ರಸ್ತೆಯ ತಿರುವನ್ನು ತೆರವುಗೊಳಿಸಿ ಕೊಡುವ ಬಗ್ಗೆ ಶೀಘ್ರ ಗಮನಹರಿಸಬೇಕಾಗಿದೆ.
ವರದಿ. ಡಿ ಎಚ್