ಪಂಜದ ಕೂತ್ಕುಂಜದಲ್ಲಿ ಶ್ರೀ ದುರ್ಗಾ ಮಹಿಳಾ ಮಂಡಲವು ಇತ್ತೀಚೆಗೆ ಉದ್ಘಾಟನೆಗೊಂಡಿತು.
ಪಂಜ ವನಿತಾ ಸಮಾಜದ ಮಾಜಿ ಅಧ್ಯಕ್ಷೆ ಶ್ರೀಮತಿ ಚಂದ್ರಾ ಹೊನ್ನಪ್ಪ ಚಿದ್ಗಲ್ರವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮವನ್ನು ಪಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಉದ್ಘಾಟನೆ ನೆರವೇರಿಸಿದರು.
ಪಂಜ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ.ಪ್ರಸಾದ್, ಪಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ನಿವೃತ್ತ ಶಿಕ್ಷಕಿ ಶ್ರೀಮತಿ ಪದ್ಮಾವತಿ ಚಿನ್ನಪ್ಪ ಪಂಜ, ಶ್ರೀಮತಿ ಹೇಮಲತಾ ಜನಾರ್ದನ್ ಮುಖ್ಯ ಅತಿಥಿಗಳಾಗಿದ್ದರು. ನೂತನ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲತಾ ದಿನೇಶ್ ಚಿದ್ಗಲ್, ಕಾರ್ಯದರ್ಶಿ ಶ್ರೀಮತಿ ವೀಣಾ ಗಿರಿಧರ್ ಇಟ್ಯಡ್ಕ ಉಪಸ್ಥಿತರಿದ್ದರು. ಖಜಾಂಜಿ ಶ್ರೀಮತಿ ವೇದಾವತಿ ಬಾಲಕೃಷ್ಣ ಚಿದ್ಗಲ್ ಪ್ರಾರ್ಥಿಸಿದರು. ಲತಾ ದಿನೇಶ್ ಸ್ವಾಗತಿಸಿದರು. ವೀಣಾ ಗಿರಿಧರ್ ವಂದಿಸಿದರು. ಹೇಮಾ ವಸಂತ್ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ಮಂಡಲದ ನೂತನ ಅಧ್ಯಕ್ಷೆಯಾಗಿ ಲತಾ ದಿನೇಶ್, ಕಾರ್ಯದರ್ಶಿಯಾಗಿ ವೀಣಾ ಗಿರಿಧರ್ , ಉಪಾಧ್ಯಕ್ಷರಾಗಿ ದೇವಕಿ ಧರ್ಮಪಾಲ, ಜೊತೆ ಕಾರ್ಯದರ್ಶಿಯಾಗಿ ವಿಮಲಾ ಉದಯ, ಖಜಾಂಜಿಯಾಗಿ ವೇದಾವತಿ ಬಾಲಕೃಷ್ಣ, ನಿರ್ದೇಶಕರಾಗಿ ಹೇಮಾ ವಸಂತ ಚಿದ್ಗಲ್, ಚಂದ್ರಾವತಿ ಭಾಸ್ಕರ, ದಮಯಂತಿ ರಾಮಯ್ಯ, ಶೇಷವೇಣಿ ಬಾಲಕೃಷ್ಣ, ಪದ್ಮಾವತಿ ಚಿನ್ನಪ್ಪ, ಹೊನ್ನಮ್ಮ ಗೋಪಾಲ, ರೋಹಿಣಿ ರಮೇಶ್ ಆಯ್ಕೆಗೊಂಡರು.
ಚಂದ್ರಾ ಹೊನ್ನಪ್ಪ ಚಿದ್ಗಲ್ ಪದಗ್ರಹಣ ನೆರವೇರಿಸಿದರು.