ಅಡಿಕೆ ಹಳದಿ ಎಲೆ ರೋಗಕ್ಕೆ ಪರ್ಯಾಯ ಬೆಳೆಗೆ ಪ್ರೋತ್ಸಾಹಧನ: ಯಾವ ಬೆಳೆಗೆ ಎಷ್ಟು-ಇಲ್ಲಿದೆ ಮಾಹಿತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

೨೦೨೨-೨೩ ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗಕ್ಕೆ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹಧನ ಕಾರ್ಯಕ್ರಮದಡಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು.

ಸದರಿ ಕಾರ್ಯಕ್ರಮದಡಿ ಕೊಡಿಯಾಲ, ನೆಲ್ಲೂರು ಕೆಮ್ರಾಜೆ, ಉಬರಡ್ಕ ಮಿತ್ತೂರು, ಸಂಪಾಜೆ, ಅರಂತೋಡು, ಕೊಲ್ಲಮೊಗ್ರ, ಆಲೆಟ್ಟಿ, ಮರ್ಕಂಜ ಹಾಗೂ ಮಡಪ್ಪಾಡಿ ಗ್ರಾಮದ ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ರೈತರಿಗೆ ವಿವಿದ ಬೆಳೆ ಬೆಳೆದಲ್ಲಿ ಶೇಕಡ ೫೦ ರಂತೆ ಹೆಕ್ಟೇರ್ ಗೆ ತೆಂಗು (ರೂ. ೩೦,೨೧೨), ತಾಳೆಬೆಳೆ (ರೂ. ೨೨೫೩೦), ಕಾಳುಮೆಣಸು (ರೂ. ೬೬೧೪೨), ಕೊಕ್ಕೋ (ರೂ. ೪೦೦೦೫), ಬಾಳೆ TC (ರೂ. ೮೮೦೧೭), ಕಾಫಿ Rubosta (ರೂ. ೩೩೬೫೩), ಕಾಫಿ Dwarf Arabica (ರೂ. ೧೨೧೩೧೬), ದಾಲ್ಚಿನ್ನಿ (ರೂ. ೮೪೭೫೬), ರಾಂಬೂಟನ್ (ರೂ. ೩೪೫೫೦) ಹಾಗೂ ಜಾಯಿಕಾಯಿ (ರೂ. ೪೪೩೧೦) ರಂತೆ ಸಹಾಯಧನ ಲಭ್ಯವಿದ್ದು ಆಸಕ್ತ ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ರೈತರು ಅರ್ಜಿಯನ್ನು ಗ್ರಾಮ ಪಂಚಾಯತ್ ನಿಂದ ಪಡೆದು ಜೂನ್ ೬ ರೊಳಗೆ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅನುಮೋದಿತ ಸಂಸ್ಥೆ / ನರ್ಸರಿಯಿಂದ ಗಿಡ ಖರೀದಿ ಮಾಡಿದ ಬಿಲ್ಲು ನೀಡಿದ್ದಲ್ಲಿ ಸಹಾಯಧನ ನೀಡಲಾಗುವುದು
೨೦೨೨-೨೩ ನೇ ಸಾಲಿಗೆ ತೋಟಗಾರಿಕೆ ಇಲಾಖೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಾಳುಮೆಣಸು, ಕೋಕೋ, ಕಂದು ಬಾಳೆ, ಗೇರು ಬೆಳೆಗಳಲ್ಲಿ ಹೊಸದಾಗಿ ತೋಟ ಮಾಡಲು, ಹಾಗೂ ಕಾಳುಮೆಣಸು ಪುನಶ್ಚೇತನ ಕಾರ್ಯಕ್ರಮ ಸಹಾಯಧನ ಲಭ್ಯವಿದ್ದು ಆಸಕ್ತ ರೈತರು ದಿನಾಂಕ: ೧೫/೦೬/೨೦೨೨ ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಲು ಕೋರಿದೆ.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ವಿವರಗಳು ಈ ಕೆಳಗಿನಂತೆ ಇರುತ್ತದೆ.
ಅರ್ಜಿ ನಮೂನೆ, ನೋಂದಾಯಿತ ನರ್ಸರಿಗಳಿಂದ ಸಸಿ ಖರೀದಿ ಮಾಡಿದ ಬಿಲ್ಲು ,(ದಿನಾಂಕ:೦೧/೦೪/೨೦೨೨ ರ ನಂತರದ್ದು), ಚಾಲ್ತಿಯಲ್ಲಿರುವ ಅರ್ಜಿದಾರರ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಮತದಾರರ ಗುರುತು ಚೀಟಿ ಜೆರಾಕ್ಸ್, ಆಧಾರ್ ಕಾರ್ಡ್ ಜೆರಾಕ್ಸ್, ಜಾತಿ ಪ್ರಮಾಣ ಪತ್ರ (ಪ.ಜಾತಿ ಮತ್ತು ಪ.ಪಂಗಡ ರೈತರಿಗೆ), ಆರ್.ಟಿ.ಸಿ., ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ/ಜಿ.ಪಿ.ಎ. ಪತ್ರ ನೀಡಬೇಕು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.