Breaking News

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್  ವತಿಯಿಂದ ಕಲ್ಮಕಾರು ಶಾಲೆಗೆ ಸಮವಸ್ತ್ರ ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆ ಕಲ್ಮಕಾರು ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಮಣ್ಯ ಇದರ ಅಧ್ಯಕ್ಷರಾದ ರಂಗಯ್ಯ ಶೆಟ್ಟಿಗಾರ್ ವಹಿಸಿದ್ದರು. ಲಯನ್ ಜಿಲ್ಲಾ ರಾಜ್ಯಪಾಲರಾದ ವಸಂತ್ ಕುಮಾರ್ ಶೆಟ್ಟಿ ಹಾಗೂ ಲಯನ್ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯರಾಮ್ ದೇರಪ್ಪಜ್ಜನ ಮನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಲಯನ್ ರಾಮಚಂದ್ರ ಪಳಂಗಾಯ ಸತೀಶ್ ಕೂಜುಗೋಡು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೆಳ್ಳಿಯಪ್ಪ ಗೌಡ ಮೆಂಟೆಕಜೆ ಇವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಾಲಿನಿ ಕೆಎಸ್ ಸ್ವಾಗತಿಸಿ, ಸಹಶಿಕ್ಷಕ ಅರವಿಂದ ಅವರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಲಯನ್ ರಂಗಯ್ಯ ಶೆಟ್ಟಿಗಾರ್, ವಿಮಾಲ ರಂಗಯ್ಯ, ದಿನೇಶ್ ಮೋಗ್ರ, ಗುರುಪ್ರಸಾದ್ ಪಂಜ, ಬಿಪಿನ್ ಜಾಕೆ, ಲಿಖಿತ್ ಪಲ್ಲೋಡಿ ಹಾಗೂ ದೀಪಕ್ ಯ್ ಪಿ ಇವರು ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 45000 ಮೌಲ್ಯದ ಎರಡು ಜೊತೆ ಸಮವಸ್ತ್ರ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಲಯನ್ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಅಧ್ಯಾಪಕ ವೃಂದ, ಊರ ಮಾನ್ಯರು, ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.