ಐನೆಕಿದು ಹಾಲು ಉತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆಯು ಮೇ.17 ರಂದು ಸಂಘದ ರಿಟರ್ನಿಂಗ್ ಅಧಿಕಾರಿಯಾದ ಬಿ.ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ಅವಿರೋಧವಾಗಿ ನಡೆಯಿತು.
ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೂಜುಗೋಡು ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸವಿತಾ ಕೋಡಿಯಡ್ಕ, ನಿರ್ದೇಶಕರುಗಳಾಗಿ ಅಜಿತ್ ಕುಮಾರ್, ಡೋಜಪ್ಪ.ಪಿ, ಕಿರಣ.ಪಿ, ಹರಿಪ್ರಸಾದ್.ಕೆ, ಚಿದಾನಂದ.ಎಂ, ರಮೇಶ್.ಕೆ, ಶ್ರೀಮತಿ ಶಿಲ್ಪಾ.ಕೆ, ರಾಮಚಂದ್ರ.ಟಿ ಇವರುಗಳು ಅವಿರೋಧವಾಗಿ ಆಯ್ಕೆಯಾದರು.