ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹೂವಯ್ಯ ಗೌಡ ಪರಮಲೆಯವರು ಮೇ.೩೧ ರಂದು ನಿವೃತ್ತರಾಗಲಿದ್ದಾರೆ.
ಮೂಲತಃ ಏನೆಕಲ್ಲು ಗ್ರಾಮದ ಪರಮಲೆ ದಿ. ಕುಕ್ಕಣ್ಣ ಗೌಡ ಮತ್ತು ದಿ. ವೆಂಕಮ್ಮ ದಂಪತಿಗಳ ಪುತ್ರರಾಗಿರುವ ಹೂವಯ್ಯ ಗೌಡರು ೧೯೮೦ ರಲ್ಲಿ ಗುತ್ತಿಗಾರು ಸಹಕಾರಿ ಸಂಘದಲ್ಲಿ ಕ್ಲರ್ಕ್ ಆಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು. ೨೦೦೭ರಲ್ಲಿ ಅಕೌಂಟೆಂಟ್ ಆಗಿ ಪದೋನ್ನತಿಗೊಂಡು, ೨೦೧೭ ರಿಂದ ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಹೂವಯ್ಯ ಗೌಡರ ಪತ್ನಿ ಶ್ರೀಮತಿ ಜಯಂತಿಯವರು ಗೃಹಿಣಿಯಾಗಿದ್ದು, ಪುತ್ರ ಗಗನ್ ಪರಮಲೆ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಶ್ರೀಮತಿ ಪಲ್ಲವಿ ಹಾಗೂ ಅಳಿಯ ಮೋಹಿತ್ ಕಾಳಮ್ಮನೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೂವಯ್ಯ ಗೌಡರು ಪ್ರಸ್ತುತ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಸಾಲ್ತಾಡಿಯಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.