ಸುಳ್ಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸುಧೀರ್ಘ ೨೮ ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸಿದ್ದ ವಿಜಯ ಪಡ್ಡಂಬೈಲ್ರವರು ಮೇ.೩೧ ರಂದು ನಿವೃತ್ತರಾಗಲಿದ್ದಾರೆ. ಮೂಲತಃ ಅಜ್ಜಾವರ ಗ್ರಾಮದ ಪಡ್ಡಂಬೈಲ್ ಮನೆತನದ ದಿ.ಅಣ್ಣಯ್ಯ ಗೌಡ ಹಾಗೂ ದಿ.ಬಾಲಕ್ಕ ದಂಪತಿಯ ಪುತ್ರರಾದ ವಿಜಯರವರು ೧೯೯೪ ರಲ್ಲಿ ಕೊಡಿಯಾಲದ ಗ್ರಾಮೀಣ ಪಶು ಚಿಕಿತ್ಸಾಲಯದಲ್ಲಿ ಡಿ ದರ್ಜೆ ನೌಕರನಾಗಿ ಸರಕಾರಿ ಸೇವೆ ಆರಂಭಿಸಿದ್ದರು. ಆದರೆ ಡಿಪ್ಯೂಟೇಶನ್ ಹಿನ್ನಲೆಯಲ್ಲಿ ಆರಂಭದಿಂದಲೂ ಸುಳ್ಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಇದುವರೆಗೆ ಕರ್ತವ್ಯ ಸಲ್ಲಿಸಿದ್ದರು. ಪಶುವೈದ್ಯಕೀಯ ಇಲಾಖೆಯಲ್ಲಿ ಸೇವೆ ಆರಂಭ ಮಾಡುವುದಕ್ಕಿಂತ ಮೊದಲು ವಿಜಯರವರು ಅಜ್ಜಾವರ ಮಂಡಲ ಪಂಚಾಯತ್ನಲ್ಲಿ ವಾಟರ್ ಸಫ್ಲೈಯರ್ ಆಗಿ ೫ ವರ್ಷ ಸೇವೆ ಸಲ್ಲಿಸಿದ್ದರು.
ವಿಜಯರವರು ಪತ್ನಿ ಪ್ರೇಮಲತಾರವರು ಗೃಹಿಣಿಯಾಗಿದ್ದು, ಪುತ್ರ ತಿಷಿನ್ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪುತ್ರಿ ಕಾವ್ಯ ಮಂಗಳೂರಿನ ದೇರಳಕಟ್ಟೆ ಫಾದರ್ ಮುಲ್ಲರ್ ಕಾಲೇಜಿನಲ್ಲಿ ೩ನೇ ವರ್ಷದ ಹೋಮಿಯೋಪತಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.