ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ಉಳ್ಳಾಕುಲು ಚಾವಡಿ ಜೀರ್ಣೋದ್ಧಾರ ಕಾರ್ಯದ ಕುರಿತು ಪೂರ್ವಭಾವಿ ಸಭೆಯು ಮೇ.28 ರಂದು ದೇವಳದಲ್ಲಿ ನಡೆಯಿತು.
ಜೂ.5 ರಂದು ದೇವಳದಲ್ಲಿ ವಿಶೇಷವಾಗಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವವನ್ನು ವರ್ಷಂಪ್ರತಿಯಂತೆ ಆಚರಿಸುವುದಾಗಿ ತೀರ್ಮಾನಿಸಲಾಯಿತು. ಉಳ್ಳಾಕುಲು ಚಾವಡಿ ನಿರ್ಮಾಣದ ರೂಪು ರೇಷೆಗಳ ಕುರಿತು ವಿಮರ್ಶೆ ನಡೆಸಲಾಯಿತು. ಜೀರ್ಣೋದ್ಧಾರದ ಬಾಬ್ತು ಧನ ಸಂಗ್ರಹಿಸಲು ಮನೆ ಮನೆ ಭೇಟಿ ನೀಡುವುದಾಗಿ ಸಮಿತಿಯವರಿಗೆ ಜವಬ್ದಾರಿ ವಹಿಸುವಂತೆ ಸೂಚಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷಎನ್.ಎ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಅನುವಂಶಿಕ ಮೊಕ್ತೇಸರರ ಶ್ರೀಪತಿ ಬೈಪಡಿತ್ತಾಯ ಆಲೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಪ್ರ.ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ರಾಮಚಂದ್ರ ಆಲೆಟ್ಟಿ, ಜಯಪ್ರಕಾಶ್ ಕುಂಚಡ್ಕ, ಸುಧಾಮ ಆಲೆಟ್ಟಿ, ಧನಂಜಯ ಕುಂಚಡ್ಕ, ಶ್ರೀಪತಿ ಭಟ್ ಮಜಿಗುಂಡಿ, ಗೋವಿಂದ ಭಟ್ ಎಲಿಕ್ಕಳ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಯತಿರಾಜ್ ಭೂತಕಲ್ಲು, ಸುಧಾಕರ ಆಲೆಟ್ಟಿ, ನಾರಾಯಣ ನಾಯ್ಕ್ ಅರಂಬೂರು, ಪವಿತ್ರನ್ ಗುಂಡ್ಯ, ಪುರುಷೋತ್ತಮ ದೋಣಿಮೂಲೆ, ದಿವಾಕರ ಭೂತಕಲ್ಲು, ಶಿವಪ್ರಸಾದ್ ಆಲೆಟ್ಟಿ, ಅರ್ಚಕರಾದ ಹರ್ಷಿತ್ ಬನ್ನಿಂತಾಯ, ಸುಬ್ರಾಯ ಭಟ್ ಮತ್ತಿತರರು ಉಪಸ್ಥಿತರಿದ್ದರು.