ರಾಜೀವ್ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ ಮತ್ತು ಮಿಮ್ಸ್ ವತಿಯಿಂದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯು ಮಂಡ್ಯ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇದರ ಪಿಇಟಿ ಕ್ರೀಡಾಂಗಣದಲ್ಲಿ ನಡೆಯಿತು. ಸುಮಾರು ೯೨ ತಂಡಗಳು ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದವು. ಕೆ.ವಿ.ಜಿ. ಮೆಡಿಕಲ್ಕಾಲೇಜು ಸುಳ್ಯ ತಂಡವು ದ್ವಿತೀಯ ಸ್ಥಾನಿಯಾಗಿ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಮಿಮ್ಸ್ಇದರ ನಿರ್ದೇಶಕರಾದಡಾ. ಹರೀಶ್ ಮತ್ತುದೈಹಿಕ ಶಿಕ್ಷಣ ನಿರ್ದೇಶಕರಾದಡಾ. ಸುರೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿತಂಡದ ನಾಯಕ ಡಾ. ಮೊಹಮ್ಮದ್ ಲಬೀಬ್, ಡಾ. ಮಹಬಲೇಶ್, ಡಾ. ಮಹಮ್ಮದ್ ಶಿಲಫ್, ಡಾ. ಸಾಹುಕಾರ್ ಬಿ.ಎಂ, ಡಾ. ಲಕ್ಷಿಶ್ ಮಂಜುನಾಥ್, ಡಾ. ಬ್ಲೆಸನ್ ಬಾಬು, ಡಾ. ಪುನೀತ್ಕುಮಾರ್ಜೈನ್, ಡಾ. ಅರವಿಂದ್, ಪುಷ್ಪೆಂದರ್ಗೊದಾರ್, ಕಿಶೋರ್, ಪ್ರತೀಕ್, ರವಿಚೌದರಿ, ಆಯಿಷ್, ಸಾಹುದ್ ಆಲಿ, ಗಗನ್, ಯುವರಾಜ್, ಪ್ರಜ್ವಲ್, ಪುವರಸನ್ ಇವರುಗಳು ತಂಡವನ್ನು ಪ್ರತಿನಿಧಿಸಿರುತ್ತಾರೆ. ಉತ್ತಮ ಬ್ಯಾಟ್ಸ್ ಮನ್ ಆಗಿ ಪುಷ್ಪೆಂದರ್ಗೊದಾರ್ ಪುರಸ್ಕೃತಗೊಂಡರು. ಕೆ.ವಿ.ಜಿ ಮೆಡಿಕಲ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಮಿತಾನ್ ಎಸ್ ತಂಡದ ನೇತೃತ್ವ ವಹಿಸಿದ್ದರು. ತಂಡದ ತರಭೇತುದಾರರಾಗಿ ಅವಿನಾಶ್ ಕುರುಂಜಿ ಸಹಕರಿಸಿದ್ದರು. ಎ.ಒ.ಎಲ್.ಇ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಮತ್ತು ಸಿಬ್ಬಂದಿ ವರ್ಗ ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.