ಕೊಡಿಯಾಲ ಬೈಲು ದಲಿತ ಕಾಲೋನಿಗೆ ಸಂಬಂಧಿಸಿದ ಶೌಚಾಲಯ ಮತ್ತು ಸ್ನಾನ ಗೃಹದ ದುರ್ಬಳಕೆ ಆರೋಪ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ದೂರು

ಸುಳ್ಯ ನಗರದ ಕೊಡಿಯಾಲ ಬೈಲು ಸರ್ಕಾರದ ವತಿಯಿಂದ ದಲಿತರ ಕಾಲೋನಿ ಅಭಿವೃದ್ಧಿಯ ಅನುದಾನ ದಡಿಯಲ್ಲಿ ಮಂಜೂರಾದ ಶೌಚಾಲಯ ಮತ್ತು ಸ್ನಾನ ಗೃಹದ ಕಟ್ಟಡವನ್ನು ಬೇರೆಡೆ ನಿರ್ಮಿಸಿ ದಲಿತ ಸಮುದಾಯದವರಿಗೆ ಅನ್ಯಾಯವೆಸಗಿತ್ತಾರೆ ಎಂದು ಆರೋಪಿಸಿ ಸಂಬಂಧಪಟ್ಟ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ ರವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ದೂರು ನೀಡಲಾಗಿದೆ.
ದೂರಿನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ದಲಿತ ಕಾಲೋನಿ ಅಭಿವೃದ್ಧಿಗೆ ಬಂದಂತಹ ಅನುದಾನವನ್ನು ದಲಿತ ಕಾಲೋನಿಯಲ್ಲಿ ಅದರ ಫಲಾನುಭವಿಗಳಿಗೆ ನೀಡದೆ ಸ್ಥಳೀಯವಾಗಿರುವ ಹಿಂದೂ ರುದ್ರಭೂಮಿ ಯ ವಠಾರದೊಳಗೆ ನಿರ್ಮಿಸಿ ಅನುದಾನವನ್ನು ದುರ್ಬಳಕೆ ಗೊಳಿಸಲಾಗಿದೆ.

ಈ ರೀತಿಯ ಅನುದಾನಗಳನ್ನು ಬೇರೆಡೆಗೆ ಕೊಂಡೊಯ್ದು ಮಾಡುವುದು ತಪ್ಪು ಎಂದು ತಿಳಿದಿದ್ದರೂ ಕೂಡ ನಿಯಮಗಳನ್ನು ಗಾಳಿಗೆ ತೂರಿ ಅನ್ಯಾಯವೆಸಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಜನಪ್ರತಿನಿಧಿಗಳ, ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅವರ ವಿರುದ್ಧ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಹಾಗೂ ಅದೇ ರೀತಿಯ 30 ಲಕ್ಷ ರೂಪಾಯಿಯ ವೆಚ್ಚದ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನ ಗೃಹವನ್ನು ಕೊ ಡಿಯಾಲ ಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ. ತಪ್ಪಿದ್ದಲ್ಲಿ ಸುಳ್ಯ ತಾಲ್ಲೂಕು ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಮನವಿಯಲ್ಲಿಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ಲೋಕಾಯುಕ್ತ ನಿಬಂಧಕರು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ದ ಕ ಜಿಲ್ಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರವರಿಗೆ ಪ್ರತಿಯನ್ನು ನೀಡಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.