Breaking News

ಜೂ. 4- 6: ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಶ್ರೀ ದೇವರ ಶಿಲಾ ವಿಗ್ರಹ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮುರುಳ್ಯ ಗ್ರಾಮದ ಪ್ರಕೃತಿ ರಮಣೀಯವಾಗಿ ಹಚ್ಚಹಸುರಿನಿಂದ ತೋಟ ಬಯಲು ಗಳಿಂದ ಕೂಡಿದ ವಿಶ್ರಾಂತ ತಾಣವೇ ಶ್ರೀಕ್ಷೇತ್ರ ಕುಕ್ಕಟ್ಟೆ. ಅತೀ ಪುರಾತನ ಕ್ಷೇತ್ರವಾಗಿದ್ದು, ಸುಮಾರು 63 ವರ್ಷಗಳ ಹಿಂದೆ ಕುಕ್ಕಟ್ಟೆ ಜನಾರ್ದನ ಆಚಾರ್ಯರ ಸ್ವಪ್ನದಲ್ಲಿ ಕಂಡಂತೆ ನಿತ್ಯಪೂಜೆ, ಶುಕ್ರವಾರ ಪೂಜೆ, ಭಜನೆ, ದರ್ಶನ ಸೇವೆಗಳು ನಡೆಯುತ್ತಿದೆ. ದೇವಾಲಯವು ಜೀರ್ಣೋದ್ಧಾರಗೊಂಡು ಧಾರ್ಮಿಕ ಕಾರ್ಯಗಳು ನಡೆದವು. ಜೂ. 4ರಿಂದ ಜೂ. 6 ರವರೆಗೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವರ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ದೇವರ ಶಿಲಾ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿರುವುದು.

ಜೂನ್ 6ರಂದು ತಂತ್ರಿಗಳ ಯತ್ಪಜರ ಸ್ವಾಗತ ಶಿಲ್ಪಿಗಳಿಂದ ಆಲಯ ಪರಿಗ್ರಹ ದೇವತಾ ಪ್ರಾರ್ಥನೆ ತೋರಣ ಪ್ರತಿಷ್ಠೆ ಗುರು ಗಣಪತಿ ಪೂಜೆ ಪುಣ್ಯಾಹವಾಚನ ನಾಂದಿ ಅಂಕುರಾರ್ಪಣೆ ಕಂಕಣ ಧಾರಣೆ ಅದೇ ದಿನ ಸಂಜೆ ಉಗ್ರಾಣ ಮುಹೂರ್ತ, ಮಂಟಪ ಸಂಸ್ಕಾರ ಯಾಗ, ಮಂಟಪ ಪ್ರವೇಶ, ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಪ್ರಾಸಾದ ಶುದ್ದಿ, ಅಘೋರ ಹೋಮ, ವಾಸ್ತು ಪೂಜೆ ಹೋಮ, ದಿಗ್ಬಲಿ ರಕ್ಷೆ ನಡೆಯಲಿರುವುದು ಜೂನ್ 5 ರಂದು ಅಗ್ನಿಜನನ, ಗಣಪತಿ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಐಕೃತ್ಯ ಹೋಮ, ಶಾಂತಿ ಹೋಮ ಹವನಾದಿಗಳು, ಬ್ರಹ್ಮಾಂಡ ರಚನೆ ನಡೆಯಲಿದೆ. ಜೂ. 6ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬೆಳಿಗ್ಗೆ ಶ್ರೀ ದೇವರ ಶಿಲಾ ವಿಗ್ರಹ ಪ್ರತಿಷ್ಠೆ, ಜೀವನ್ಯಾಸ, ಆಯುಧ ನ್ಯಾಸ, ಶಕ್ತಿನ್ಯಾಸ, ಮಹಾಕುಂಭಾಭಿಷೇಕ, ಪ್ರಸನ್ನಪೂಜೆ, ವಿಧಿ ನಿಯಮಗಳ ವಾಗ್ದಾನ, ಅಲಂಕಾರ ಪೂಜೆ, ಅಷ್ಟಾವಧಾನ ಸೇವೆ, ಪ್ರಾರ್ಥನೆ, ಲೋಕಾರ್ಪಣೆ, ಮಂತ್ರಾಕ್ಷತೆ, ವೈದಿಕ ಸಂಭಾವನೆ, ಬ್ರಹ್ಮಾರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.