ಸುಳ್ಯ ನ.ಪಂ. ಆವರಣದ ಎದುರಿನ ಶೆಡ್ನಲ್ಲಿ ಹಾಗೂ ನ.ಪಂ. ಕಚೇರಿ ಹಿಂಬದಿ ಹಾಕಲಾಗಿದ್ದ ಕಸ ಸಾಗಾಟ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ.
ಕಳೆದ ೫ ವರ್ಷಗಳಿಂದ ನಗರದ ಕಸವನ್ನು ಬೇರೆಲ್ಲೂ ಹಾಕಲು ಜಾಗವಿಲ್ಲದೆ ನ.ಪಂ. ಎದುರಿನ ದೊಡ್ಡ ಶೆಡ್ಡ್ನಲ್ಲಿ ತುಂಬಿಸಲಾಗುತ್ತಿತ್ತು. ಆ ಶೆಡ್ನಲ್ಲಿಯೂ ಕಸ ತುಂಬಿ ನ.ಪಂ. ಕಚೇರಿಯ ಹಿಂಬದಿಗೆ ಹಾಕಲಾಗುತ್ತಿತ್ತು.
ಕಸ ತುಂಬಿ ದುರ್ನಾತ ಬೀರತೊಡಗಿ ಪ್ರತಿಭಟನೆಗಳು ನಡೆದಿತ್ತು. ಕಳೆದ ವಾರ ಕಸ ಸಾಗಾಟ ಮಾಡಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇಂದಿನಿಂದ ಟೆಂಡರ್ ವಹಿಸಿಕೊಂಡವರು ಕಸ ಸಾಗಾಟ ಮಾಡಲು ಆರಂಭಿಸಿರುವುದಾಗಿ ತಿಳಿದುಬಂದಿದೆ.