Breaking News

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಶರಿಯತ್ತ್ ಕಾಲೇಜು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಯತ್ ಕಮಿಟಿ ವತಿಯಿಂದ ಮುಂದಿನ ಜೂನ್ ತಿಂಗಳಲ್ಲಿ ಹತ್ತನೆಯ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿನಿಗಳಿಗೆ ಪಿಯುಸಿ ಕಲಿಕೆಯೊಂದಿಗೆ ಧಾರ್ಮಿಕ ಶಿಕ್ಷಣ ವಾದ ಶರೀಅತ್ ಕಾಲೇಜು ಪ್ರಾರಂಭ ಮಾಡಲಾಗುವು ಎಂದು ಮೊಗರ್ಪಣೆ ಜುಮ್ಮಾ ಮಸೀದಿ ಖತೀಬ್ ನೂತನವಾಗಿ ಆರಂಭಗೊಳ್ಳುವ ಶರಿಯತ್ತ್ ಕಾಲೇಜು ಪ್ರಾಂಶುಪಾಲ ಹಾಪೀಳ್ ಶೌಕತ್ತ್ ಆಲಿ ಸಖಾಫಿ ತಿಳಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಕ್ಸಲೆನ್ಸಿ ಕ್ಯಾಂಪಸ್ ಎಂಬ ಹೆಸರಿನೊಂದಿಗೆ ಹಾದಿಯ ಡಿಪ್ಲೊಮಾ ಕೋರ್ಸ್ ಮೊಗರ್ಪಣೆ ಜಮಾಯತ್ ಕಮಿಟಿಯ ಅಧೀನದಲ್ಲಿ ಆರಂಭಗೊಳ್ಳುವ ಶರಿಯತ್ ಕಾಲೇಜಿಗೆ ವಿದ್ಯಾರ್ಥಿನಿ ಗಳಿಗೆ ದಾಖಲಾತಿ ಆರಂಭಗೊಂಡಿದ್ದು ಸುಳ್ಯ ನಗರದ ಮತ್ತು ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಈಗಾಗಲೇ ೨೫ಕ್ಕೂ ಹೆಚ್ಚು ವಿದ್ಯಾರ್ಥಿನಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದು ಇದೇ ಬರುವ ಜೂನ್ ತಿಂಗಳಿನಿಂದ ವಿದ್ಯಾರ್ಥಿನಿಗಳಿಗೆ ತರಗತಿ ಆರಂಭಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಇದನ್ನು ಉನ್ನತ ಮಟ್ಟಕ್ಕೆ ಏರಿಸಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸುವ ಯೋಜನೆಯನ್ನು ನಮ್ಮ ಸಂಸ್ಥೆಯಿಂದ ರೂಪಿಸಲಾಗಿದೆ. ಉತ್ತಮ ಶಿಕ್ಷಣವನ್ನು ನೀಡುವುದರೊಂದಿಗೆ ಜೀವನದಲ್ಲಿ ರೂಪಿಸಿಕೊಳ್ಳಬೇಕಾದ ಗುಣನಡತೆ ಗಳ ಬಗ್ಗೆ ಪ್ರತ್ಯೇಕ ತರಬೇತಿಗಳನ್ನು ನೀಡಲಾಗುತ್ತದೆ ಎಂದವರು ಹೇಳಿದರು.
ಇದೀಗ ನಮ್ಮ ಸಂಸ್ಥೆಯಲ್ಲಿ ಕುರಾನ್, ತಪ್ಸಿರ್, ಹದೀಸ್, ಫಿಖ್ಹ್, ಗೃಹ ನಿರ್ವಹಣೆ, ತಸವುಫ್ ತರಗತಿ,ಶರೀಅತ್ ತರಗತಿ, ವ್ಯಕ್ತಿಕ ವಿಕಸನ ತರಗತಿ, ಇಸ್ಲಾಮಿಕ್ ಚೌಕಟ್ಟಿನೊಳಗೆ ಬೋಧನೆ, ವಿವಾಹಿತ ಮಹಿಳೆಯರಿಗೆ ಶರೀಅತ್ ಕಲಿಯಲು ಅವಕಾಶ ಮುಂತಾದ ಸೌಲಭ್ಯಗಳು ಲಭಿಸಲಿದೆ ಎಂದರು.
ಗೋಷ್ಠಿಯಲ್ಲಿ ಮೊಗರ್ಪಣೆ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಪುಡ್, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕಾರ್ಯದರ್ಶಿ ರಹೀಮ್ ಸಂಗಂ,ನಿವೃತ್ತ ಪ್ರಾಂಶುಪಾಲ ಉಮ್ಮರ್ ಹಳೆಗೇಟು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.