Breaking News

ಶಾಂತಿನಗರ ಕ್ರೀಡಾಂಗಣ ಕಾಮಗಾರಿಯಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲು. ಬ್ರಹ್ಮಾಂಡ ಭ್ರಷ್ಟಾಚಾರ : ಕಾಂಗ್ರೆಸ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸ್ಟೇಡಿಯಂ ಕೆಲಸ ಪೂರ್ಣಗೊಳ್ಳದಿರುವುದು ಮತ್ತು 11೦ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಆಗದಿರುವುದಕ್ಕೆ ಸಚಿವ ಅಂಗಾರರೇ ನೇರ ಹೊಣೆ : ಪಿ.ಸಿ., ಅಡ್ಪಂಗಾಯ, ಮುಂಡೋಡಿ, ಎಂ.ವಿ.ಜಿ.

“ಶಾಂತಿನಗರ ಕ್ರೀಡಾಂಗಣ ಕಾಮಗಾರಿಯಲ್ಲಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದ್ದು, ಬ್ರಹ್ಮಾಂಡ ಭ್ರಷ್ಟತೆ ನಡೆದಿದೆ. ಆ ಪ್ರದೇಶದಿಂದ ಲಕ್ಷಗಟ್ಟಲೆ ಕೆಂಪು ಕಲ್ಲು ಸಾಗಾಟವಾಗಿರುವುದೇ ಅವರ ಭ್ರಷ್ಟಾಚಾರಕ್ಕೆ ಸಾಕ್ಷಿ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ ಮತ್ತು ಎಂ. ವೆಂಕಪ್ಪ ಗೌಡರು ಹೇಳಿದ್ದಾರೆ. ಅವರು ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.


“ಶಾಂತಿನಗರ ಕ್ರೀಡಾಂಗಣದ ಯೋಜನೆ ೧೯೯೬ರಲ್ಲಿ ತಯಾರಾಗಿದೆ. ೨೦೦೬ರಲ್ಲಿ ಕೆಲಸ ಪ್ರಾರಂಭವಾಗಿದೆ. ಇವತ್ತು ನೋಡುವಾಗ ಇನ್ನು ಎಷ್ಟು ವರ್ಷದ ಬಳಿಕ ಜನರ ಉಪಯೋಗಕ್ಕೆ ಸಿಕ್ಕೀತು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಲಕ್ಷಗಟ್ಟಲೆ ಕೆಂಪುಕಲ್ಲು ಕಡಿದು ಮಾರಾಟ ಮಾಡಲಾಗಿದೆ” ಎಂದು ಹೇಳಿದ ಧನಂಜಯ ಅಡ್ಪಂಗಾಯರು, “ಈ ಕ್ರೀಡಾಂಗಣವನ್ನು ೨೦೦ಮೀ. ನಿಂದ ೪೦೦ ಮೀ. ಟ್ರ್ಯಾಕ್‌ಗೆ ಪರಿವರ್ತಿಸಲಾಗಿದೆ” ಎಂದು ಸಚಿವರು ಹೇಳಿದ್ದಾರೆ, “ಅದು ಹೇಗೆ? ಪರಿವರ್ತಿಸಿದರು. ಯಾರ ಒಪ್ಪಿಗೆ ಪಡೆದಿದ್ದಾರೆ. ೨೦೦ ಮೀ. ಟ್ರ್ಯಾಕ್‌ನ ಕೆಲಸ ಕಂಪ್ಲೀಶನ್ ರಿಪೋಟ್೯ ಆಗಿತ್ತೇ?” ಎಂದು ಅವರು ಪ್ರಶ್ನಿಸಿದರಲ್ಲದೇ, “ಕಲ್ಲು ಕಡಿದ ಗುಂಡಿಯನ್ನು ಮುಚ್ಚಲು ೩೦ ಲಕ್ಷ ವಿನಿಯೋಗಿಸಲಾಗಿದೆ. ಇದು ಹಣದ ದುರುಪಯೋಗವಲ್ಲವೇ? ನಾವು ಸಚಿವರ ಬದ್ಧತೆಯನ್ನು ಪ್ರಶ್ನಿಸುತ್ತಿದ್ದೇವೆ. ಅವರದ್ದು ಭರವಸೆ ಮಾತ್ರ. ಸಚಿವರು ಮತ್ತು ಅಧಿಕಾರಿಗಳು ಜನರ ಪ್ರಶ್ನೆಗೆ ಉತ್ತರ ಕೊಡಬೇಕು. ಅಂತಹ ದುರ್ಗಮ ಪ್ರದೇಶದಲ್ಲಿ ೪೦೦ ಮೀ. ಟ್ರ್ಯಾಕ್ ಗೆ ಪರ್ಮಿಷನ್ ಕೊಟ್ಡವರಾದರೂ ಯಾರು?. ೩೦ ವರ್ಷದಿಂದ ಶಾಸಕರಾಗಿ ಒಂದು ಸ್ಟೇಡಿಯಂ ಕೆಲಸ ಪೂರ್ಣಗೊಳಿಸಲಾಗದಿದ್ದರೆ ಏನು ಹೇಳಬೇಕು? ಇನ್ನು ಎಷ್ಟು ದಿನ ಹೀಗೆ ಹೇಳ್ತಾರೆ? ೧೧೦ ಕೆವಿ ವಿದ್ಯುತ್ ವಿತರಣಾ ಕೇಂದ್ರದ ವಿಚಾರವೂ ಹೀಗೇ ಆಗಿದೆ. ಅರಣ್ಯದೊಳಗಡೆ ಯಾವ ಯಾವ ಸರ್ವೆ ನಂಬರ್‌ನಲ್ಲಿ ಲೈನ್ ಹಾದು ಹೋಗ್ತದೆ? ಎಂದು ಅರಣ್ಯ ಇಲಾಖೆಯವರು ಕೇಳಿದ್ದರು. ಆ ವರದಿ ಸಲ್ಲಿಸಲಾಗಿದೆಯೇ?” ಸುಳ್ಯದವರು ಮೂವರು ಸಂಸದರಿದ್ದಾರೆ. ಸುಳ್ಯದ ಶಾಸಕರು ಸೇರಿದಂತೆ ಇಬ್ಬರು ಸಚಿವರಿದ್ದಾರೆ. ಇಲ್ಲಿ ಕೆಸರು ನೀರು, ವಿದ್ಯುತ್ ಸರಿ ಇಲ್ಲ, ಕ್ರೀಡಾಂಗಣ ಇಲ್ಲ. ನಮ್ಮ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ನೋಡಿ ” ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಮಾತನಾಡಿ, “ಶಾಂತಿನಗರ ಸ್ಟೇಡಿಯಂ ಗೆ ಹೋಗಲು ಸರ್ವಋತು ರಸ್ತೆ ಇಲ್ಲ. ಇಲ್ಲಿ ಏಕಮುಖ ರಸ್ತೆ ಇದೆ. ಅಲ್ಲದೇ ದುರ್ಗಮ ಪ್ರದೇಶ. ಮೊನ್ನೆ ಇನ್ನೂ ಒಂದೂವರೆ ಕೋಟಿ ರೂ ಬೇಕೆಂದು ಹೇಳುತ್ತಿದ್ದರು. ಈಗ ೬ ಕೋಟಿ ರೂ. ಬೇಕೆಂದು ಹೇಳುತ್ತಿದ್ದಾರೆ. ಅಲ್ಲಿ ಹಾಕಿದ ಮಣ್ಣಿನ ರಾಶಿಯಿಂದಾಗಿ ಪಕ್ಕದ ನಿವಾಸಿಗಳಿಗೆ ಆತಂಕ ಸೃಷ್ಠಿಯಾಗಿದೆ. ಅವರಿಗೆ ಜೀವದ ಭದ್ರತೆ ಇಲ್ಲದಂತಾಗಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ದುಡ್ಡು ಮಾಡುವುದಕ್ಕಾಗಿ ಈ ಯೋಜನೆ ಎಂದು ಮೊನ್ನೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಹೇಳಿದ್ದೆ. ಅದಕ್ಕೆ ಸಚಿವರು, ಪಿ.ಸಿ.ಜಯರಾಮರು ತಾ.ಪಂ.ಸದಸ್ಯನಾಗಿರುವಾಗ ಸೇವಾಜೆ – ಮಡಪ್ಪಾಡಿ ರಸ್ತೆ ಮಾಡುವುದಾಗಿ ಹೇಳಿದ್ದರೂ ಮಾಡಿಸಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ತಾ.ಪಂ.ನಿಂದ ಕೋಟಿ ಹಣ ತಂದು ಮಾಡಲು ಸಾಧ್ಯವೇ ಎಂಬುದನ್ನು ತಿಳಿಯದಷ್ಟು ಶಾಸಕರು ದಡ್ಡರೇ? ನಮ್ಮಿಂದ ಆಗಿಲ್ಲ ಬಿಡಿ. ಅಂಗಾರರು ೩೦ ವರ್ಷದಿಂದ ಶಾಸಕರಾಗಿ ಇದ್ದಾರೆ. ಅವರು ಮಾಡಿದ್ದಾರಾ? ಮಡಪ್ಪಾಡಿ ಗ್ರಾಮದಲ್ಲಿ ಪತ್ರಕರ್ತರು ಮಾಡಿದ ಕಾರ್ಯಕ್ರಮದಿಂದಾಗಿ ೨ ಕೋಟಿ ರೂ.ಗಳ ರಸ್ತೆ ಆಗಿದೆ. ಸಚಿವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅದರಲ್ಲಿ ೫೦ ಲಕ್ಷವನ್ನು ಬೇರೆಡೆಗೆ ಹೋಗದಂತೆ ತಡೆಯದ ಸಚಿವರು ನಿದ್ದೆ ಮಾಡಿದ್ದರಾ? ಎಂದವರು ಮರುಪ್ರಶ್ನಿಸಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿಯವರು ಮಾತನಾಡಿ, “ನಾವು ಮಾಹಿತಿ ಹಕ್ಕಿನಲ್ಲಿ ಪೂರ್ಣ ಮಾಹಿತಿ ಪಡಿತೇವೆ. ಸ್ಟೇಡಿಯಂ ಜಾಗದಲ್ಲಿ ಕಲ್ಲುಕೋರೆ ಮಾಡಿ ಹಣ ಮಾಡಿರುವ ಬಗ್ಗೆ ದೂರು ನೀಡ್ತೇವೆ. ಸಾರ್ವಜನಿಕ ತೆರಿಗೆಯ ಹಣ ಸರಿಯಾದ ಪ್ಲಾನ್ ನಲ್ಲಿ ಮಾಡಿದರೆ ದುರುಪಯೋಗವಾಗುತ್ತಿರಲಿಲ್ಲ. ಪುನಃ ಪುನಃ ಅದೇ ಸ್ಥಳಕ್ಕೆ ಖರ್ಚು ಮಾಡುತ್ತಿರುವುದಾದರೆ ಅದು ಭ್ರಷ್ಟಾಚಾರ ವಲ್ಲವೇ? ಈಗ ತಡೆಗೋಡೆ ನಿರ್ಮಿಸುವ ಬಗ್ಗೆ ಡಿಸಿಯವರು ಹೇಳುತ್ತಿದ್ದಾರೆ. ಅದು ಅಷ್ಟು ಬೇಗ ಆಗಲು ಸಾಧ್ಯವೇ? ಇಲ್ಲಿಂದ ಪ್ರಸ್ತಾವನೆ ಹೋಗಿ ತಾಂತ್ರಿಕ ಮಂಜೂರಾತಿ ಮತ್ತು ಆಡಳಿತಾತ್ಮಕ ಮಂಜೂರಾತಿ ಆಗಿ ಟೆಂಡರ್ ಆಗಿ ನಂತರ ಕಾಮಗಾರಿ ಆರಂಭಗೊಳ್ಳಬೇಕಾಗುತ್ತದೆ. ಈಗೀಗ ಸಚಿವರು ತಮಗೇ ಎಲ್ಲಾ ಗೊತ್ತಿದೆ ಎಂದು ಮಾತನಾಡುತ್ತಿದ್ದಾರೆ. ಹಾಗಿದ್ದರೆ ಅಲ್ಲಿ ಸ್ಟೇಡಿಯಂ ಮಾಡಬಹುದಾ ಮಾಡಬಾರದಾ ಎಂಬುದು ತಿಳಿದಿರಬೇಕಿತ್ತಲ್ಲ? ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ಮಾತನಾಡಿ, “ಕೆಲ ವರ್ಷಗಳ ಹಿಂದೆ ಶಾಸಕರು ಚೆನ್ನಕೇಶವ ದೇವಸ್ಥಾನದ ಮುಂದುಗಡೆ ರಸ್ತೆ ತಗ್ಗಿಸುವುದಾಗಿ ಹೇಳಿ ಹೊಂಡ ತೋಡಿಸಿದ್ದು ಮತ್ತು ಜನರ ವಿರೋಧದಿಂದಾಗಿ ಪುನಃ ಅಲ್ಲಿಗೆ ಮಣ್ಣು ತುಂಬಿಸಿದ ಪ್ರಕರಣದಲ್ಲಿ ಜೆಸಿಬಿಯವರಿಗೆ ದುಡ್ಡು ಆದುದು ಮಾತ್ರ. ಜನರಿಗೆ ಉಪಯೋಗವಾಗಲಿಲ್ಲ. ಜನರ ತೆರಿಗೆ ಹಣ ಪೋಲಾಗಿದೆ. ಆದ್ದರಿಂದ ಸ್ಟೇಡಿಯಂ ಕಾಮಗಾರಿ ಗುಡ್ಡ ಅಗೆದು ದುಡ್ಡು ಮಾಡಿದ್ದು ಎಂದು ಪಿ.ಸಿ.ಜಯರಾಮರು ಹೇಳಿದ್ದರಲ್ಲಿ ತಪ್ಪು ಏನಿದೆ?”ಎಂದು ಪ್ರಶ್ನಿಸಿದರು.
ಅಂಗಾರರು ಸಚಿವರಾಗಿದ್ದರೆ ಎಂದು ಜನರಿಗೆ ಕಾಣುತ್ತಿದೆಯೇ? ಅವರು ಮೊನ್ನೆ ಡಿ.ಸಿ. ಬಂದ ಕಾರ್ಯಕ್ರಮದಲ್ಲಿ ಹೇಗಿದ್ದರು? ತಾನು ಸಚಿವ ಎಂದು ಅವರ ಮನಸ್ಸಿಗೇ ಬಂದಿಲ್ಲ. ಅಲ್ಲಿ ಸಚಿವರೇ ಜಿಲ್ಲಾಧಿಕಾರಿಗಾಗಿ ಕಾದಿದ್ದಾರೆ. ಸಚಿವರಿಗೆ ಮನವಿ ಇರಲಿಲ್ಲ. ಡಿ.ಸಿ.ಗೆ ಎಲ್ಲರೂ ಮನವಿ ನೀಡುತ್ತಿದ್ದರು. ಸಚಿವರು ಮೌನವಾಗಿ ಕುಳಿತಿದ್ದರು. ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಯವರ ಬಳಿ ಜಗಳ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ವಕ್ತರರಾದ ನಂದರಾಜ್ ಸಂಕೇಶ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್.ಗಂಗಾಧರ ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.