ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗ್ರಾಹಕರ ಸದಸ್ಯರ ಸಭೆಯು ಮೇ.28 ರಂದು ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಿರ್ದೇಶಕ ರಾದ ಹರೀಶ್ ರಂಗತ್ತಮಲೆ, ಸುಧಾಕರ ಆಲೆಟ್ಟಿ, ಶಿವರಾಮ ಕಾಪುಮಲೆ,ಸಿ.ಇ.ಒ ದಿನಕರ ಆಲೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳೆ ವಿಮೆಯ ಬಗ್ಗೆ, ಬೆಳೆ ಸಾಲ ಮರುಪಾವತಿ ಮಾಡುವ ಕುರಿತು, ವಾಹನ ಖರೀದಿ ಸಾಲ ಮತ್ತು ಸಂಘದಿಂದ ನೀಡುವ ಇತರ ಸಾಲದ ಬಗ್ಗೆ ಮಾಹಿತಿ ನೀಡಲಾಯಿತು. ದ್ವಿಚಕ್ರ, ಅಟೋ ರಿಕ್ಷಾ,ಜೀಪು,ಕಾರು ಖರೀದಿ ಯ ಮೇಲೆ ಸದಸ್ಯರಿಗೆ ಶೇ.10% ವಾರ್ಷಿಕ ದರದಲ್ಲಿ ಸಾಲ ಸೌಲಭ್ಯವಿರುವುದಾಗಿ ತಿಳಿಸಿದರು. ಸಂಘದ ಸಂಘದ ಸದಸ್ಯರು ಭಾಗವಹಿಸಿದರು.