ಅಮರಪಡ್ನೂರು ಗ್ರಾಮದ
ಶೇಣಿ ಪರಿಸರದಲ್ಲಿ ಅನಾಥವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಕೇಶವ ಭಟ್ ಎಂಬವರನ್ನು ಕಳೆದ 2021 ನೇ ಇಸವಿಯಲ್ಲಿ ಶೇಣಿ ಶಾಲೆಯ ಶಿಕ್ಷಕರು ಪಂಚಾಯತ್ ಗೆ ಮನವಿ ಸಲ್ಲಿಸಿದ ಮೇರೆಗೆ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ರವರ ನೇತೃತ್ವದಲ್ಲಿ ಉಡುಪಿಯ ಕಾರುಣ್ಯ ಆಶ್ರಮಕ್ಕೆ ಕರೆದುಕೊಂಡು ಹೋಗಿದಾಖಲಿಸಲಾಗಿತ್ತು.
ಇದೀಗ ಆ ವ್ಯಕ್ತಿಯು ಆಶ್ರಮದಲ್ಲಿ ನಿಧನರಾಗಿದ್ದು ಅವರ ಲಿಖಿತ ಒಪ್ಪಿಗೆಯ ಮೇರೆಗೆ ಮೃತದೇಹವನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದೇಹದಾನ ಮಾಡಲಾಗಿದೆಯೆಂದು ತಿಳಿದುಬಂದಿದೆ. ಅನಾಥ ವ್ಯಕ್ತಿಯ ಸಾವಿನ ಸುದ್ದಿ ತಿಳಿದು ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ಹಾಗೂ ಸಿದ್ಧಿವಿನಾಯಕ ಭಟ್ ಚೂಂತಾರು, ಸತ್ಯವೆಂಕಟೇಶ್ ಹೆಬ್ಬಾರ್ ರವರು ಉಡುಪಿಗೆ ತೆರಳಿ ವಿಷಯ ಕಾಪು ಪೋಲಿಸ್ ಠಾಣೆಗೆ ತಿಳಿಸಿ ದೇಹದಾನ ಮಾಡುವ ಕುರಿತು ದಾಖಲಿಸಿರುವುದಾಗಿ ತಿಳಿದು ಬಂದಿದೆ.