ರೋಟರಿ ಜಿಲ್ಲೆ 3181 ಆವಾರ್ಡ್ ನೈಟ್ ಕಾರ್ಯಕ್ರಮ ಮೈಸೂರಿನ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ಇಲ್ಲಿ ಮೇ 28 ಮತ್ತು 29ರಂದು ನಡೆಯಿತು ..ಈ ಸಮಾರಂಭದಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದಕ್ಕೆ ವರ್ಷ ಇಡೀ ಮಾಡಿದ ಕಾರ್ಯಕ್ರಮಗಳನ್ನು ಗುರುತಿಸಿ ಚಿನ್ನದ ಪದಕ ಅವಾರ್ಡನ್ನು ಜಿಲ್ಲಾ ರಾಜ್ಯಪಾಲರಾದ ರವೀಂದ್ರ ಭಟ್ ಮತ್ತು ತಂಡದವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ವಿಜಯಕುಮಾರ್ ಅಮೈ, ಕಾರ್ಯದರ್ಶಿ ಶಿವರಾಮ ಏನೆಕಲ್ ನಿಯೋಜಿತ ಅಧ್ಯಕ್ಷರಾದ ಗೋಪಾಲ ಎಣ್ಣೆಮಜಲು .ಪೂರ್ವ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಮಾಯಿಲಪ್ಪ ಸಂಕೇಶ ,ಗಿರಿಧರ ಸ್ಕಂದ ,ಉಮೇಶ್ ಕೆ ಎನ್ ,ಬಾಲಕೃಷ್ಣ ಪೈ ಮತ್ತು ನೂತನ ಸದಸ್ಯ ನಾಗರಾಜ ಪರಮಲೆ .ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಸದಸ್ಯ ರವಿ ಕಕ್ಕೆಪದವು ಇವರಿಗೆ ಅನ್ ಸಂಗ್ ಹೀರೊ ಎಂಬ ಬಿರುದನ್ನು ಕೊಟ್ಟು ಗೌರವಿಸಲಾಯಿತು .