ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ರೋವರ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಋತುಚಕ್ರ ಸುಚಿತ್ವದ ದಿನದ ಪ್ರಯುಕ್ತ ರೇಂಜರ್ಸ್ ಹಾಗೂ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕಾಲೇಜಿನ ಐಸಿಟಿ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ಋತುಚಕ್ರದ ಶುಚಿತ್ವದ ಬಗ್ಗೆ ಕೃಪಾ ಎ ಎನ್ ಉಪನ್ಯಾಸಕರು ಸಮಾಜಕಾರ್ಯ ವಿಭಾಗ ಇವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ರೋವರ್ ಘಟಕದ ನಾಯಕ ಉಮೇಶ್ ಹಾಗೂ ರೇಂಜರ್ ಘಟಕದ ನಾಯಕಿ ಶೋಭಾ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಂಜರ್ ನಾಯಕಿ ಮೇಘನಾ ಎಸ್ ಪ್ರಥಮ ಬಿ ಎಸ್ ಡಬ್ಲ್ಯೂ ಸ್ವಾಗತಿಸಿ, ಆಶ್ರಿತ ಕೆ ದ್ವಿತೀಯ ಬಿಕಾಂ ವಂದಿಸಿದರು.