ಐವರ್ನಾಡು ಗ್ರಾಮದ ಕೊಚ್ಚಿ ಖಂಡಿಗೆಮೂಲೆ ನಿವಾಸಿ, ಬಾಳಿಲ ತೋಟದಮೂಲೆಯ ತರವಾಡಿನ ಹಿರಿಯರು ಕೊರಗಪ್ಪ ಗೌಡ ಅವರು ಇಂದು ಸ್ವಗೃಹದಲ್ಲಿ ಅಲ್ಪ ಕಾಲದ ಅಸೌಖ್ಯತೆಯಿಂದ ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಇವರ ಪತ್ನಿ ಭಾಗೀರಥಿ ಕೇವಲ 20 ದಿನಗಳ ಹಿಂದೆಯಷ್ಟೆ ನಿಧನರಾಗಿದ್ದರು.
ಮೃತರು ಪುತ್ರರಾದ ಮಾಧವ ಖಂಡಿಗೆಮೂಲೆ, ಅಚ್ಚುತ ಖಂಡಿಗೆಮೂಲೆ, ಪುತ್ರಿಯರಾದ ಶ್ರೀಮತಿ ಸರೋಜಿನಿ ಧರ್ಮಪಾಲ ಮುಚ್ಚಾರ, ಶ್ರೀಮತಿ ಜಯಂತಿ ಮಣಿಕಂಠ ಕಲ್ಲುಗದ್ದೆ ಹಾಗು ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.