ಸ್ವಚ್ಚ ಭಾರತ್ ತಂಡದಿಂದ ಶ್ರಮದಾನ
ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಚ್ಚ ಭಾರತ್ ತಂಡದ ವತಿಯಿಂದ ಶ್ರಮದಾನ ಮೇ.29 ರಂದು ನಡೆಯಿತು.
ಉಬರಡ್ಕ ಬಳ್ಳಡ್ಕ ತಿರುವಿನಲ್ಲಿ ಕೋಳಿ ತ್ಯಾಜ್ಯ ಎಸೆದಿರುವುದು ಕಂಡು ಬಂದಿದ್ದು, ಅದನ್ನು ಕೂಡಾ ಶ್ತಮದಾನದ ತಂಡ ಸ್ವಚ್ಚ ಗೊಳಿಸಿದೆ.
“ನಾವು ಪ್ರತೀ 15 ದಿನಕ್ಕೊಮ್ಮೆ ಸ್ವಚ್ಚ ಭಾರತ್ ತಂಡದಿಂದ ಶ್ರಮದಾನ ಕೈಗೊಳ್ಳುತ್ತಿದ್ದೇವೆ. ಬಳ್ಳಡ್ಕ ತಿರುವಿನಲ್ಲಿ ಸುಳ್ಯ ನಗರದಿಂದ ಬರುವವರು ಕೋಳಿ ತ್ಯಾಜ್ಯ ಎಸೆದಿದ್ದಾರೆ. ಇಂದು ನಾವು ಸ್ವಚ್ಚಗೊಳಿಸಿದ್ದೇವೆ. ಇದೇ ರೀತಿ ಮುಂದುವರಿದರೆ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಅವರಿಗೆ ದಂಡ ಹಾಕಲಿದ್ದೇವೆ ಎಂದು ಗ್ರಾ.ಪಂ. ಸದಸ್ಯ, ಸ್ವಚ್ಚ ಭಾರತ ತಂಡದ ಸದಸ್ಯರೂ ಆಗಿರುವ ಅನಿಲ್ ಬಳ್ಳಡ್ಕ ತಿಳಿಸಿದ್ದಾರೆ.