ಗುತ್ತಿಗಾರು ಗ್ರಾಮದ ಕಿನ್ನಿಕುಮ್ರಿ ಶ್ರೀಮತಿ ಗಂಗಮ್ಮ ಮತ್ತು ಗುಡ್ಡಪ್ಪ ಮಾಸ್ತರ್ ಕಿನ್ನಿಕುಮ್ರಿ ರವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಆಚರಣೆ ಮೇ.29 ರಂದು ಅವರ ಮನೆಯಲ್ಲಿ ನಡೆಯಿತು. ಗುಡ್ಡಪ್ಪ ಮಾಸ್ತರ್ ಶಿಷ್ಯರಾದ ಪಂಜ ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ, ಪ್ರಗತಿಪರ ಕೃಷಿಕ ಶಿವರಾಮಯ್ಯ ಕರ್ಮಜೆ , ಪರಮೇಶ್ವರ ಗೌಡ ಬಿಳಿಮಲೆ ಮಾತನಾಡಿದರು.ಕಾರ್ಯಕ್ರಮದಲ್ಲಿ ನವೀನ್ ಕುಮಾರ್ ಕಿನ್ನಿಕುಮ್ರಿ ಸ್ವಾಗತಿಸಿದರು.
ಜಯರಾಮ ಕಲ್ಲಾಜೆ ನಿರೂಪಿಸಿದರು . ಕುಮಾರ ಸ್ವಾಮಿ ಕಿನ್ನಿಕುಮ್ರಿ ವಂದಿಸಿದರು. ಶ್ರೀಮತಿ ಗಂಗಮ್ಮ ಮತ್ತು ಗುಡ್ಡಪ್ಪ ಮಾಸ್ತರ್ ಕಿನ್ನಿಕುಮ್ರಿ ಪುತ್ರರಾದ ದೇವಿಪ್ರಸಾದ್, ದಿವಾಕರ, ರವಿರಾಜ, ಪುತ್ರಿ ಶ್ರೀಮತಿ ವಸಂತಲಕ್ಷಿ ಸೋನಜಿತ್, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ನೆಂಟರಿಷ್ಟರು, ಬಂಧುಮಿತ್ರರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಸವ್ಯ ಸಾಚಿ ಸುಭಾಷ್ ಪಂಜ ನಿರ್ದೇಶನದ
ಸವ್ಯ ಸಾಚಿ ರಂಗಕಲಾ ಕೇಂದ್ರ ಚೌಕಿ ಮನೆ ಪ್ರಸ್ತುತಿಯ ಯಕ್ಷ-ಭಾವ-ಗಾನ -ನಾಟ್ಯ -ಕುಂಚ ಜರುಗಿತು.