ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ – ಮುಪ್ಪೇರ್ಯ ಇದರ ವತಿಯಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಿಂಗಾರಿ ಮೇಳದ ಸದಸ್ಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮೇ. 29ರಂದು ನಡೆಯಿತು.
ಬಾಳಿಲ ವಿದ್ಯಾಬೋಧಿನೀ ಶಾಲಾ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ
ಪ್ರದೀಪ್ ಟಿ (624) ಹಾಗೂ ರಕ್ಷಿತ (525), ಮಿಥುನ್ (465),
ಪ್ರಜ್ವಲ್ ಬಿಎಂ (278) ರವರನ್ನು ಅಭಿನಂದಿಸಲಾಯಿತು.
ಸಿಂಗಾರಿ ಮೇಳದ ಅಧ್ಯಕ್ಷ ಲೋಕೇಶ್ ಬೆಳ್ಳಿಗೆ ಕೋಶಾಧಿಕಾರಿ ರೋಹಿತ್,
ಸಂಘಟನಾ ಕಾರ್ಯದರ್ಶಿ ರಘುರಾಮ ಕೋಟೆಬನ, ತಂಡದ ಉಪನಾಯಕ ರಮೇಶ್ ಮತ್ತು ಸಿಂಗಾರಿ ಮೇಳದ ಮಹಿಳಾ ಹಾಗೂ ಪುರುಷ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು