ಮೇ.೨೮ರ ರಾತ್ರಿ ಮರ್ಕಂಜ ಕಡೆಯಿಂದ ಅರಂತೋಡು ಕಡೆಗೆ ಪಿಕಪ್ನಲ್ಲಿ ಕೆಲವರು ದನ ಸಾಗಿಸುತ್ತಿದ್ದುದು ಕಂಡು ಬಂದಿದ್ದು, ಅರಂತೋಡಿನ ವಿಶ್ವ ಹಿಂದೂ ಪರಿಷತ್ನ ಯುವಕರು ಗಾಡಿಯನ್ನು ತಡೆದಾಗ ಆರೋಪಿಗಳು ಪಿಕಪನ್ನು ಬಿಟ್ಟು ಪರಾರಿಯಾದರು. ಅಲ್ಲದೇ ಈ ಗಾಡಿಯಲ್ಲಿ ೩ ತುಂಡು ಬೀಟೆ ಮರದ ದಿಮ್ಮಿಗಳು ಪತ್ತೆಯಾಗಿದ್ದು, ಈಗ ಅರಣ್ಯ ಇಲಾಖಾ ವಶದಲ್ಲಿ ಪಿಕಪ್ ಅನ್ನು ಇಡಲಾಗಿದೆ.