ಸುಳ್ಯ ಸಂಪಾಜೆ ಗೂನಡ್ಕ ಬೀಜದಕಟ್ಟೆ ದಿ|ಸೈದು ಹಾಜಿ ಯವರ ಪುತ್ರ ಸುಬೇದಾರ್ ಎಸ್ ಎಸ್ ಅಬ್ದುಲಾ ಬೀಜದಕಟ್ಟೆ ಇತ್ತೀಚೆಗೆ ನಿಧರಾಗಿದ್ದರು.
ಇವರ ಮನೆಗೆ ನಿವೃತ್ತ ಸೈನಿಕರು ಭೇಟಿ ನೀಡಿ ಸಂತಾಪ ಸೂಚಿಸಿದರು.
20 ವರ್ಷ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದರು ಕಾರ್ಗಿಲ್ ಯುದ್ಧದಲ್ಲಿ ಸೇನೆಯಲ್ಲಿ ಭಾಗವಹಿಸಿದ್ದರು
ಇವರ ಮನೆಗೆ ಭೇಟಿ ನೀಡಿದ ನಿವೃತ್ತ ಸೈನಿಕ ಸಂಘದ ಜಗದೀಶ ಕೆ.ಪಿ, ಮೋನಪ್ಪ ಗೌಡ ಅಡ್ಕಬಳೆ ರವರ ಸಹಕಾರದೊಂದಿಗೆ ಮುಂದೆ ಮೃತರ ಪತ್ನಿ ಮತ್ತು ಕುಟುಂಬಕ್ಕೆ ನಿವೃತ್ತ ಸೈನಿಕರಿಗೆ ಸಿಗುವ ಸವಲತ್ತುಗಳ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಸೈನಿಕರಾದ ಪರಮೇಶ್ವರ, ಸೀತಾರಾಮ, ಚಂದ್ರಶೇಖರ ಪಿ ವಿ,ಚೆಂಗಪ್ಪ,ಕೃಷ್ಣಪ್ಪ ಗೌಡ ಕೆ,ಹರೀಶ್ ಎ.ಎಸ್, ತಿರುಮಲೇಶ್ವರ,ಲಕ್ಷ್ಮೀನಾರಾಯಣ, ಪದ್ಮನಾಭ ಯು ಎಸ್,ವಾಸುದೇವ ಕೆ ಕೆ,ಚಂದ್ರಶೇಖರ ಪಿ ಎಸ್,ಪುಟ್ಟ ಸಿ ಹೆಚ್,ಪ್ರವೀಣ್ ಎಂ ಕೆ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಮೃತರ ಸಹೋದರ ರಹೀಮ್ ಬೀಜದಕಟ್ಟೆ, ತಾಯಿ ಆಸಿಯಮ್ಮ ಪತ್ನಿ ಪುತ್ರಿಯರು ಆಳಿಯಂದಿರು ಇದ್ದರು.