Breaking News

ಕಲ್ಲುಗುಂಡಿ ರಸ್ತೆ ಬದಿ ಅಳವಡಿಸಿದ್ದ ಬ್ಯಾನರ್ ಹರಿದ ಯುವಕರು ಪೊಲೀಸ್ ಠಾಣೆಗೆ ಹಾಜರು, ಕೇಸು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಂಗಳೂರಿನಿಂದ ಕುಶಾಲನಗರಕ್ಕೆ ಪ್ರವಾಸ ತೆರಳಿದ ಯುವಕರು ಕಲ್ಲುಗುಂಡಿಯಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಬ್ಯಾನರ್‌ನ್ನು ಹರಿದಿದ್ದು, ಆ ಯುವಕರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಘಟನೆ ಮೇ. ೨೯ರಂದು ರಾತ್ರಿ ವರದಿಯಾಗಿದೆ.

ಕಲ್ಲುಗುಂಡಿ ಪುಳಿಯತ್ತಡಿ ಬಳಿ ಹಾಕಲಾಗಿದ್ದ ಎಸ್‌ಡಿಪಿಐ ಸಮಾವೇಶದ ಬ್ಯಾನರ್ ಹಾಗೂ ಕಾಂಗ್ರೆಸ್ ಪಕ್ಷದ ಅಭಿನಂದನೆಯ ಬ್ಯಾನರನ್ನು ಮೇ. ೨೮ರಂದು ರಾತ್ರಿ ಹರಿಯಲಾಗಿತ್ತು. ಮಂಗಳೂರು ಮೂಲದ ೧೮ ಮಂದಿ ಯುವಕರು ಕುಶಾಲನಗರಕ್ಕೆ ಎಸ್‌ಎಂಎಲ್ ಇಸ್ಯೂ ಟ್ರಾವೆಲ್ ವಾಹನದಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ಅವರ ವಾಹನವು ಗೂನಡ್ಕ ಪುಳಿಯತ್ತಡಿ ಎಂಬಲ್ಲಿ ಚಾಲಕ ಉಪಾಹಾರ ಸೇವಿಸಲು ನಿಲ್ಲಿಸಿದ್ದನೆಂದೂ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ವಿಶ್ರಾಂತಿ ಪಡೆದಿದ್ದರೆನ್ನಲಾಗಿದೆ.
ಈ ಸಂದರ್ಭದಲ್ಲಿ ವಾಹನದಲ್ಲಿ ಇದ್ದ ಯುವಕರು ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಎಸ್‌ಡಿಪಿಐ ಸಮಾವೇಶದ ಬ್ಯಾನರ್, ಕಾಂಗ್ರೆಸ್ ಪಕ್ಷದ ನಾಲ್ಕು ಬ್ಯಾನರ್‌ಗಳನ್ನು ಹರಿದು ಹಾಕಿ ಅಲ್ಲಿಂದ ತೆರಳಿದ್ದರು. ಬ್ಯಾನರ್ ಹರಿಯುವುದನ್ನು ಎಸ್‌ಡಿಪಿಐ ಸಮಿತಿಯ ಕಾರ್ಯದರ್ಶಿ ಶರೀಫ್ ಎಂಬವರು ನೋಡಿದ್ದರು. ಆದರೆ ಅವರು ಅದನ್ನು ಪ್ರಶ್ನಿಸದೆ ಯುವಕರು ಬಂದಿದ್ದ ವಾಹನದ ನಂಬರನ್ನು ಬರೆದುಕೊಂಡರು. ಶರೀಫ್‌ರವರು ಇದನ್ನು ಅಶ್ರಫ್ ಟರ್ಲಿಯವರಿಗೆ ತಿಳಿಸಿದರು. ಅವರು ಬರೆದುಕೊಂಡ ಕೆಎ. ೨೦ ಡಿ ೧೪೫೫ ನಂಬರನ್ನು ಸುಳ್ಯ ಪೊಲೀಸರಿಗೆ ನೀಡಿ ಘಟನೆಯನ್ನು ವಿವರಿಸಿದರು. ಪೊಲೀಸರು ತನಿಖೆ ಆರಂಭಿಸಿದರು. ಈ ವೇಳೆ ಪೊಲೀಸರಿಗೆ ಯುವಕರು ತೆರಳಿದ ವಾಹನದ ಚಾಲಕನ ಮೊಬೈಲ್ ನಂಬರ್ ದೊರಕಿತು.
ಚಾಲಕ ಪಾಣೆಮಂಗಳೂರಿನವನೆಂದು ಗೊತ್ತಾಯಿತು. ಅವರನ್ನು ಸುಳ್ಯ ಠಾಣೆಗೆ ಬರುವಂತೆ ಪೊಲೀಸರು ಹೇಳಿದರು. ಕುಶಾಲನಗರದಿಂದ ಮೇ. ೨೯ರಂದು ಸಂಜೆ ಪ್ರವಾಸ ಮುಗಿಸಿ ಮಂಗಳೂರಿಗೆ ಹೊರಟ ಯುವಕರ ತಂಡ ಕಲ್ಲುಗುಂಡಿ ಪೊಲೀಸ್ ಹೊರಠಾಣೆಗೆ ಬಂದರು. ಅಲ್ಲಿ ಯುವಕರು ತಪ್ಪೊಪ್ಪಿಕೊಂಡರೆಂದೂ, ಆದರೆ ಬ್ಯಾನರ್ ಅಳವಡಿಸಿದವರು ಯುವಕರ ಮೇಲೆ ಕೇಸು ದಾಖಲಿಸಬೇಕೆಂದು ಕೇಳಿಕೊಂಡ ಮೇರೆಗೆ ಕಲ್ಲುಗುಂಡಿ ಹೊರಠಾಣೆ ಪೊಲೀಸರು ಅವರನ್ನು ಸುಳ್ಯ ಪೊಲೀಸ್ ಠಾಣೆಗೆ ಕಳುಹಿಸಿದರು. ಸುಳ್ಯ ಠಾಣೆಯಲ್ಲಿ ರಾತ್ರಿ ಯುವಕರ ವಿಚಾರಣೆ ನಡೆಸಿದ ಪೊಲೀಸರು ಅವರ ಮೇಲೆ ಪೆಟ್ಟಿ ಕೇಸು ದಾಖಲಿಸಿ, ಮುಚ್ಚಳಿಕೆ ಬರೆಯಿಸಿ ಕಳುಹಿಸಿಕೊಟ್ಟರೆಂದು ತಿಳಿದುಬಂದಿದೆ.
ರಾತ್ರಿ ಬ್ಯಾನರ್ ಹರಿದ ಯುವಕರ ಪರವಾಗಿ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಬೂಡು ರಾಧಾಕೃಷ್ಣ ರೈ, ಲತೀಶ್ ಗುಂಡ್ಯ ಮೊದಲಾದವರಿದ್ದರೆಂದೂ, ಪೊಲೀಸರಿಗೆ ದೂರು ನೀಡಿದ ಎಸ್‌ಡಿಪಿಐಯ ಅಶ್ರಫ್ ಟರ್ಲಿ, ಆಬೀದ್ ಪೈಚಾರು, ಶರೀಫ್ ಶೆಟ್ಯಡ್ಕ ಮೊದಲಾದವರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.