ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾ ಸ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕುಕ್ಕೆ ಸುಬ್ರಹ್ಮಣ್ಯ ದ ಪಿ.ಬಿ.ಹರಿಪ್ರಸಾದ್ ರೈ ಚುನಾಯಿತರಾಗಿದ್ದಾರೆ. ಮೇ 29 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆದು, ಇಂದು ಮತ ಎಣಿಕೆ ನಡೆಯಿತು.
ಹಾಲಿ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅವರ ನೇತ್ರತ್ವದಲ್ಲಿ ಸ್ಪರ್ಧಿಸಿದ ಎಲ್ಲ 10 ಮಂದಿ ಚುನಾಯಿತರಾಗಿದ್ದಾರೆ.
ಹರಿಪ್ರಸಾದ ರೈ ಅವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಗಿದ್ದು, ಮಂಗಳೂರು ಪ್ರೆಸ್ ಕ್ಲಬ್ನ ಉಪಾಧ್ಯಕ್ಷರಾಗಿದ್ದಾರೆ.