ಸುಬ್ರಹ್ಮಣ್ಯ ವಲಯದ ಫಾರೆಸ್ಟರ್ ಸಂತೋಷ್ ದಮ್ಮಸೂರ್‌ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರ ಕೊಡಮಾಡುವ ೨೦೨೧ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಸುಬ್ರಹ್ಮಣ್ಯ ವಲಯದ ಫಾರೆಸ್ಟರ್ ಸಂತೋಷ್ ಶಿವಪ್ಪ ದಮ್ಮಸೂರ್ ಆಯ್ಕೆಯಾಗಿದ್ದಾರೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ಟ್ಟು ೨೫ ಮಂದಿಗೆ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದ್ದು ಸುಳ್ಯ ಅರಣ್ಯ ಇಲಾಖೆಯಿಂದ ಸಂತೋಷ್‌ರವರು ಸಂಶೋಧನಾ ವಿಭಾಗದಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಪಂಜ ವಲಯದ ಗುತ್ತಿಗಾರು, ಬಳ್ಪ, ಏನೆಕಲ್ಲು, ಮತ್ತು ಕೇನ್ಯ ಗಸ್ತುಗಳಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದಿನ ನಿತ್ಯದ ಗಸ್ತಿನಲ್ಲಿರುವ ಜಾತಿವಾರು ಸಸಿಗಳ ಸಂಖ್ಯೆಗಳಲ್ಲಿ ಗಮನಿಸಿದ ಅಂಶಗಳ ಆಧಾರದ ಮೇಲೆ ಕೆಲ ಜಾತಿಯ ಸಸಿಗಳ ಸಂಖ್ಯೆಯ ಸಾಂದ್ರತೆ ಹೆಚ್ಚಿಸಿ ಸಂರಕ್ಷಿಸುವ ಮನಸ್ಥಿತಿಯಲ್ಲಿ ಮತ್ತು ವೈಜ್ಞಾನಿಕ ಚಿಂತನೆಯಲ್ಲಿ ಸ್ವ ಇಚ್ಛೆಯಿಂದ ಈ ಜಾತಿಯ ಸಸಿಗಳ ಬೀಜ ಅಂತವಾ ಕಾಡುಸಸಿಗಳನ್ನು ಆಯ್ದು ತಂದು ಪಂಜ ವಲಯದ ಏನೆಕಲ್ಲು ಸಸ್ಯ ಕ್ಷೇತ್ರದಲ್ಲಿ ಪೋಷಣೆ ಮಾಡಿ ಅಭಿವೃದ್ಧಿ ಪಡಿಸಿದ ನೆಡುತೋಪುಗಳಲ್ಲಿ ನೆಟ್ಟು ಪೋಷಣೆ ಮಾಡಿ ಸಸಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಕೆಲಸ ಮಾಡಿರುವುದರಿಂದ ಸಂತೋಷ್‌ರನ್ನು ಆಯ್ಕೆ ಮಾಡಲಾಗಿದೆ.
ಸಂತೋಷ್ ರವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದವರು. ವಿದ್ಯಾಭ್ಯಾಸದ ಬಳಿಕ ೨೦೦೯ರಲ್ಲಿ ಉಪ್ಪಿನಂಗಡಿ ವಲಯ ಶಿರಾಡಿ ಯಲ್ಲಿ ಅರಣ್ಯರಕ್ಷಕರಾಗಿ ಕೆಲಸಕ್ಕೆ ಸೇರಿದ್ದ ಇವರು, ೨೦೧೩ರಲ್ಲಿ ಪಂಜ ವಲಯಕ್ಕೆ ವರ್ಗಾವಣೆಗೊಂಡರು. ೨೦೨೦ರಲ್ಲಿ ಉಪವಲಯಾರಣ್ಯಾಧಿಕಾರಿಯಾಗಿ ಭಡ್ತಿಗೊಂಡು ಸುಬ್ರಹ್ಮಣ್ಯ ವಲಯಕ್ಕೆ ಬಂದರು. ೨೦೨೧ರ ಸೆಫ್ಟೆಂಬರ್ ತಿಂಗಳಿಂದ ಕೇಂದ್ರಿಯ ಮರಗಳ ಸಂಗ್ರಹಾಲಯ ನೆಟ್ಟಣದಲ್ಲಿ ನಿಯೋಜನೆಯ ಮೇಲೆ ಕರ್ತವ್ಯದಲ್ಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.