ಸುಳ್ಯ ಜೂನಿಯರ್ ಕಾಲೇಜ್ ಸಮೀಪದ ನಿವಾಸಿ ಅಟೋ ಚಾಲಕ ಹನೀಫ್ ರವರು (48ವರ್ಷ) ಹೃದಯ ಸಂಬಂಧಿ ಕಾಯಿಲೆಯಿಂದ ನಿನ್ನೆ ರಾತ್ರಿ 3 ಗಂಟೆಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಕಳೆದ 3 ವರ್ಷ ಗಳಿಂದ ಮೊಗರ್ಪಣೆ ಮಸೀದಿಯಲ್ಲಿ ಸಿಬ್ಬಂದಿಯಾಗಿ ಮಸೀದಿ ಉಸ್ತಾದರುಗಳಿಗೆ ಊಟ ತರುವ ಕೆಲಸ ನಿರ್ವಹಿಸುತ್ತಿದ್ದರು.
ಕಳೆದ ಕೆಲವು ತಿಂಗಳುಗಳ ಹಿಂದೆ ಹಾರ್ಟ್ ಆ್ಯಟಾಕ್ ಸಂಭವಿಸಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತ್ನಿ ಫಾತಿಮಾ, ಪುತ್ರಿ ಅನ್ನತ್ ಬೀವಿ, ಪುತ್ರ ಮೊಹಮ್ಮದ್ ಅನ್ವರ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.