ಸುಬ್ರಹ್ಮಣ್ಯದ ಪರ್ವತಮುಖಿ ಅಂಗನವಾಡಿ ಕೇಂದ್ರದಲ್ಲಿ ಬೇಸಿಗೆ ಶಿಬಿರ ಮೇ. 28 ಮತ್ತು 30 ರಂದು ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ತಾರಾ ಇವರ ಅಧ್ಯಕ್ಸತೆಯಲ್ಲಿ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಗುಣ ಮಕ್ಕಳಿಗೆ ಶಿಬಿರದ ಉದ್ದೇಶ, ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು, ಮಕ್ಕಳಿಗೆ ಚಿತ್ರಕಲೆ, ಡಾನ್ಸ್, ಆಟೋಟ, ಸಂಗೀತ ತರಬೇತಿಯನ್ನು ನೀಡಲಾಯಿತು. ಸ್ಥಳೀಯ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಸಂಭ್ರಮಿಸಾಲಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ಉಷಾ, ಪೋಷಕರು ಉಪಸ್ಥಿತರಿದ್ದರು.