Breaking News

ನೆಟ್ಟಾರು: ಅಕ್ಷಯ ಯುವಕ ಮಂಡಲ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ

 

ಅಕ್ಷಯ ಯುವಕ ಮಂಡಲದ ವತಿಯಿಂದ ನೆಟ್ಟಾರು ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಶಾಲಾ ಹಳೇ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಮೇ 30ರಂದು ನೆಟ್ಟಾರು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಶ್ರೀಜಿತ್ ರೈ ಮಣಿಕ್ಕರ ವಹಿಸಿದ್ದರು. ಉದ್ಘಾಟನೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು ನೆರವೇರಿಸಿದರು. ಕುಮಾರಿ ಮನಸ್ವಿ ಮತ್ತು ಶ್ರಾವ್ಯ ಪ್ರಾರ್ಥಿಸಿದರು. ಅತಿಥಿಗಳಾಗಿ ಜೇಸಿಐ ಬೆಳ್ಳಾರೆ ಇದರ ನಿಕಟಪೂರ್ವಧ್ಯಾಕ್ಷರಾದ ಪದ್ಮನಾಭ ಕಲಾಸುಮ,ನೆಟ್ಟಾರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಶ್ವನಾಥ ಪೆಲತ್ತಮೂಲೆ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಳಿನಾಕ್ಷಿ ಹಾಗೂ ಅಕ್ಷತಾ ಮಹಿಳಾ ಮಂಡಲದ ಅಧ್ಯಕ್ಷೆ ತೇಜೇಶ್ವರಿ ಉಪಸ್ಥಿತರಿದ್ದರು.ಅತಿಥಿಗಳು ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಿದರು. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 500ಕ್ಕೂ ಮಿಕ್ಕಿ ಅಂಕ ಪಡೆದ ನೆಟ್ಟಾರು ಶಾಲಾ ಹಳೇ ವಿದ್ಯಾರ್ಥಿಗಳಾದ ಕಾವ್ಯಶ್ರೀ, ಕಾರ್ತಿಕ್ ಕುಮಾರ್, ಅಕ್ಷಯ್, ಆಯಿಷತ್ ಫಸೀಲ ಹಾಗೂ ಪ್ರತೀಕಾ ಇವರುಗಳನ್ನು ಶಾಲು, ಫಲಪುಷ್ಪ,ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು,ಪೋಷಕರು, ಯುವಕ ಮಂಡಲದ ಸದಸ್ಯರು, ಮಹಿಳಾ ಮಂಡಲದ ಸದಸ್ಯರು ಹಾಜರಿದ್ದರು. ಪಾರಿಜಾತ ಕೆಫೆ ಬೆಳ್ಳಾರೆಯ ಶಶಿಕಾಂತ್ ಉಪಹಾರದ ವ್ಯವಸ್ಥೆ ಮಾಡಿದರು. ವಸಂತ ನೆಟ್ಟಾರು ಪ್ರಾಸ್ತವಿಸಿ,ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಅಧ್ಯಕ್ಷ ಶ್ರೀಜಿತ್ ರೈ ಧನ್ಯವಾದವಿತ್ತರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.