ಜೇಸಿಐ ವಲಯ XV ರಲ್ಲಿ ಗುರುತಿಸಿಕೊಂಡ ಬೆಳ್ಳಾರೆ ಜೇಸಿಐ ಮೇ. 29 ರಂದು ಮಡಂತ್ಯಾರಿನಲ್ಲಿ ನಡೆದ ಮಧ್ಯಂತರ ವಲಯ ಸಮ್ಮೇಳನದಲ್ಲಿ ಜೇಸಿಐ ಬೆಳ್ಳಾರೆಯು Special project winner ಮತ್ತು ವಲಯದಿಂದ ಕೊಡುವಂತಹ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಲಯ ಅಧ್ಯಕ್ಷ ಜೆ ಸಿ ರಾಯನ್ ಉದಯ ಕ್ರಾಸ್ತಾ ಮತ್ತು ವಲಯ XV ಪ್ರಾಂತ್ಯ B ಯ ಉಪಾಧ್ಯಕ್ಷ ಜೆ ಸಿ ಪ್ರಶಾಂತ್ ಲಾಯಿಲ ಮತ್ತು ವಲಯದ ಉಪಾಧ್ಯಕ್ಷರುಗಳು, ಜೆಸಿಐ ಬೆಳ್ಳಾರೆಯ ಅಧ್ಯಕ್ಷ ನಿರ್ಮಲಾ ಜಯರಾಂ ರವರಿಗೆ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಬೆಳ್ಳಾರೆ ಜೇಸಿಐನ ಪೂರ್ವಾಧ್ಯಕ್ಷರು ಗಳು ಜೇಸಿ ಸದಸ್ಯರು ಜೂನಿಯರ್ ಜೇಸಿ ಬಂಧುಗಳು ಭಾಗವಹಿಸಿದ್ದರು.