ಎಸ್. ಎಸ್.ಪಿ.ಯು ಕಾಲೇಜು ಪ್ರೌಢ ಶಾಲೆ ಸುಬ್ರಹ್ಮಣ್ಯದ ಸ್ಕೌಟ್ ಗೈಡ್ಸ್ ಘಟಕದ ಬೇಸಿಗೆ ಶಿಬಿರವನ್ನು ಮೇ.30 ರಂದು ಉದ್ಘಾಟಿಸಲಾಯಿತು.
ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಅಧ್ಯಾಪಕ ಮೋಹನ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯಸ್ಥರಾಗಿರುವ ಯಶವಂತ ರೈ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಮಾಸ್ಟರ್ ಸತೀಶ್ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗ್ಯೆಡ್ ಕ್ಯಾಪ್ಟನ್ ಸ್ಮಿತಾ .ಕೆ.ಎಸ್., ಅದ್ಯಾಪಕರಾದ ಕೃಷ್ಣ ಭಟ್, ಸ್ಕೌಟ್ ಗೈಡ್ಸ್ ನಾಯಕರಾದ ಚಿನ್ಮಯ್. ಡಿ.ಎಸ್ ಮತ್ತು ಭಾನುಶ್ರೀ ಉಪಸ್ಥಿತರಿದ್ದರು. ಅನನ್ಯ. ಎಸ್ ಸ್ವಾಗತಿಸಿ, ಅಂಕಿತಾ .ಎಂ.ಎನ್ ವಂದಿಸಿ, ಆಶ್ಲೇಷ್ ಎಸ್.ಆರ್ ಕಾರ್ಯಕ್ರಮ ನಿರ್ವಹಿಸಿದರು.