ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಕಾರ್ಯನಿರ್ವಹಣ ತಂಡದ ಸಭೆಯು ಮೇ. 28ರಂದು ಬಿಜೆಪಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಶುಭದಾ ಯಸ್. ರೈ ಅಧ್ಯಕ್ಷತೆ ವಹಿಸಿದ್ದರು.
ಪ್ರೇಮಲತಾ ರಾವ್ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಜಿಲ್ಲೆಯಿಂದ ಕೊಡುವ ಕೆಲಸ ಕಾರ್ಯಗಳನ್ನು ಎಲ್ಲಾ ಮಂಡಲದವರು ಸರಿಯಾಗಿ ನಿಬಾಯಿಸುತ್ತಿದ್ದೀರಿ ಇನ್ನು ಮುಂದೆಯೂ ಜಿಲ್ಲೆಯಿಂದ ಕೊಡುವ ಜವಾಬ್ದಾರಿಗಳನ್ನು ಬೂತ್ ಮಟ್ಟದಿಂದಲೇ ಮಾಡಬೇಕು ಮಹಿಳಾಮೋರ್ಚಾವತಿಯಿಂದ ಒಂದು ಶಕ್ತಿ ಕೇಂದ್ರದಿಂದ ಮತ್ತೊಂದು ಶಕ್ತಿ ಕೇಂದ್ರಕ್ಕೆ ಪ್ರವಾಸ ಕೈಗೊಳ್ಳಬೇಕು ಎಂದರು.
ಮಹಿಳಾ ಮೋರ್ಚಾದ ಅಧ್ಯಕ್ಷರು ಶುಭದಾ ರೈ ಇವರು ಸಂಘಟನಾತ್ಮಕವಾಗಿ ಮಾತನಾಡಿದರು. ಮೋದಿಜಿಯವರು ಪ್ರಧಾನಿಯಾಗಿ ಎಂಟು ವರ್ಷ ಪೂರೈಸಿದ ಸಲುವಾಗಿ ಜಿಲ್ಲೆಯಿಂದ ವಿವಿಧ ಕಾರ್ಯಕ್ರಮವನ್ನು ಮಾಡುವ ಅಭಿಯಾನ ಇದೆ ಜಿಲ್ಲೆಯಿಂದ ಕೊಟ್ಟ ಕೆಲಸವನ್ನು ಮಹಿಳೆಯರು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಹಾಗೂ ಮನೆ ಮನೆ ಭೇಟಿ ನೀಡಿ ಸರ್ಕಾರದ ಯೋಜನೆಗಳಿಂದ ವಂಚಿತರಾದವರಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ನಾವೆಲ್ಲರೂ ಶ್ರಮ ಪಡಬೇಕು ಎಂದರು ಜಿಲ್ಲೆಯಲ್ಲಿ ಬೀಜದ ಉಂಡೆಯ ಬಗ್ಗೆ ಮಹಿತಿ ನೀಡಿದ್ದಾರೆ ಅದನ್ನು ನಮ್ಮಲ್ಲಿ ಕಾರ್ಯರೂಪ ಕ್ಕೆ ತರಬೇಕು ಎಂದರು. ಮಾಜಿ ಪಂಚಾಯತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಅವರು ಮಾತನಾಡಿ ನಮ್ಮ ಪಾರ್ಟಿ ಯಾವ ಉದ್ದೇಶದಿಂದ ಹುಟ್ಟಿಕೊಂಡಿತ್ತು? ಹಿಂದುತ್ವವನ್ನು ಸಾರುವ ದೇಶ ನಮ್ಮದು ನಮ್ಮ ಮುಂದಿನ ಪೀಳಿಗೆಯವರು ನೆಮ್ಮದಿಯಿಂದ ಇರಬೇಕಾದರೆ ಮೋದಿಜಿಯವರು ಮುಂದೆನು ನಮ್ಮ ಪ್ರಧಾನಮಂತ್ರಿಯಾಗಿ ಮುಂದುವರಿಯಬೇಕು ಅದಕ್ಕೆ ನಾವು ಭೂತ್ ಮಟ್ಟದಿಂದಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆ ತಲುಪಿಸುವ ಕೆಲಸ ಕಾರ್ಯಗಳನ್ನು ಮಾಡಬೇಕು ಪ್ರತಿಯೊಬ್ಬ ಮಹಿಳಾ ಕಾರ್ಯಕರ್ತರು ಗ್ರಾಮದ ಅಧ್ಯಕ್ಷರು,ಸದಸ್ಯರು ಮಹಿಳಾ ಮೋರ್ಚಾ ದ ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಹೇಳಿದರು. ಪುಷ್ಪ ಮೇದಪ್ಪ ವಂದೇ ಮಾತರಂ ಹಾಡಿದರು. ಮಹಿಳಾ ಮೋರ್ಚಾ ಸದಸ್ಯೆ ಶಕುಂತಲಾ ಸ್ವಾಗತಿಸಿದರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಶೇಖರ್ ಅವರು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿನಿ ಕಟ್ಟೆಪುಣಿ ವಂದಿಸಿದರು.