ಮಂಗಳೂರಿನ ತರುಣ್ ಡ್ಯಾನ್ಸ್ ಯೂನಿಟಿ ಜೆಪ್ಪು ಹಾಗೂ ಬಂಟ್ವಾಳದ ತುಡರ್ ಸೇವಾ ಟ್ರಸ್ಟ್ ಅಮ್ಮಾಡಿ ವತಿಯಿಂದ ಮೇ.28ರಂದು ನಡೆದ ನೃತ್ಯಸಂಭ್ರಮ 2022ರಲ್ಲಿ ಸೋನ ಅಡ್ಕಾರು ಅವರನ್ನು ಡ್ಯಾನ್ಸಿಂಗ್ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು.
ಸುಳ್ಯದ ಡಿ. ಯುನೈಟೆಡ್ ಡ್ಯಾನ್ಸ್ ತಂಡದ ವಿದ್ಯಾರ್ಥಿನಿಯಾಗಿರುವ ಸೋನ ಅಡ್ಕಾರು ಅವರು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಜಾಲ್ಸೂರು ಗ್ರಾಮದ ಅಡ್ಕಾರು ಶರತ್ ಹಾಗೂ ಶ್ರೀಮತಿ ಶೋಭಾ ದಂಪತಿಗಳ ಪುತ್ರಿ.