ಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ಚೊಕ್ಕಾಡಿಯ ವಸಂತ ಕುಮಾರ್ ಪೋನಡ್ಕ ಪದೋನ್ನತಿ ಹೊಂದಿ ಅಧಿಕಾರ ವಹಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಪ್ರಥಮ ಬಾರಿಗೆ ಸುಳ್ಯ ತಾಲೂಕಿನ ಚೊಕ್ಕಾಡಿಯ ದಿ. ಪೋನಡ್ಕ ಪರಮೇಶ್ವರಯ್ಯ ಮತ್ತು ದಿ. ಸಾವಿತ್ರಿಯವರ ಸುಪುತ್ರ ವಸಂತ ಕುಮಾರ ಪೋನಡ್ಕ, ಇವರು ಮೇ.31 ರಂದು ಪದೋನ್ನತಿ ಹೊಂದಿ, ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.