ಮೈಸೂರಿನ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ಇಲ್ಲಿ ನಡೆದ ರೋಟರಿ ಜಿಲ್ಲೆ 3181ಇದರ ಅವಾರ್ಡ್ ನೈಟ್ ಸಮಾರಂಭದಲ್ಲಿ ಬೆಳ್ಳಾರೆ ಟೌನ್ ರೋಟರಿ ಕ್ಲಬ್ ವರ್ಷ ಇಡೀ ನಡೆಸಿದ ಕಾರ್ಯಕ್ರಮಗಳನ್ನು ಗುರುತಿಸಿ ಜಿಲ್ಲಾ ರಾಜ್ಯಪಾಲರಾದ ರವೀಂದ್ರ ಭಟ್ ಮತ್ತು ತಂಡದವರು ಗೋಲ್ಡ್ ಕ್ಲಬ್ ಅವಾರ್ಡ್ ನೀಡಿ ಗೌರವಿಸಿದರು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಪದ್ಮನಾಭ ಬೀಡು, ಕಾರ್ಯದರ್ಶಿ ವಿನಯ್ ಕುಮಾರ್ ಪೂರ್ವಾಧ್ಯಕ್ಷ ಎ.ಕೆ ಮಣಿಯಾಣಿ, ನಿಯೋಜಿತ ಅಧ್ಯಕ್ಷ ಕೇಶವ ಮೂರ್ತಿ, ನಿಯೋಜಿತ ಕಾರ್ಯದರ್ಶಿ ರವೀಂದ್ರ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.