ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗುತ್ತಿಗಾರು ಸೊಸೈಟಿಯಿಂದ ರೂ. 25,೦೦೦ ದೇಣಿಗೆಯನ್ನು ಸೊಸೈಟಿ ಅಧ್ಯಕ್ಷ ವೆಂಕಟ್ ದಂಬೆಕೋಡಿಯವರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ರಿಗೆ ಮೇ. 31 ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಕಿಶೋರ್ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ ಬೆಳ್ಯಪ್ಪ ಗೌಡ ಕಡ್ತಲ್ಕಜೆ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ಆನಂದ ಹಲಸಿನಡ್ಕ, ಕುಂಞ ಬಳ್ಳಕ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ., ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಸಂಪ್ಯಾಡಿ, ಸಂಘದ ಸಿಬ್ಬಂದಿ ವರ್ಗ, ಪ್ರೆಸ್ ಕ್ಲಬ್ ಖಜಾಂಜಿ ಯಶ್ವಿತ್ ಕಾಳಂಮನೆ, ನಿರ್ದೇಶಕ ಗಿರೀಶ್ ಅಡ್ಪಂಗಾಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ, ಪತ್ರಕರ್ತ ದಯಾನಂದ ಕಲ್ನಾರ್ ಉಪಸ್ಥಿತರಿದ್ದರು.