ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುಧೀರ್ಘ 42 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಮೇ. 31 ರಂದು ನಿವೃತ್ತರಾದ ಸಹಕಾರಿ ಸಂಘದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಹೂವಯ್ಯ ಗೌಡರಿಗೆ ಸೊಸೈಟಿ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಸಂಘದ ಸಭಾಂಗಣದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹಾಗೂ ಉಪಾಧ್ಯಕ್ಷ ಕಿಶೋರ್ಕುಮಾರ್ ಅಂಬೆಕಲ್ಲು ಶಾಲು, ಹಾರ, ಸ್ಮರಣಿಕೆ ನೀಡಿ ಬೀಳ್ಕೊಟ್ಟು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬೆಳ್ಯಪ್ಪ ಗೌಡ ಕಡ್ತಲ್ಕಜೆ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ಆನಂದ ಹಲಸಿನಡ್ಕ, ಕುಂಞ ಬಳ್ಳಕ್ಕ, ಚಂದ್ರಾವತಿ ಮುಂಡೋಡಿ, ಮಂಜುಳಾ ಮತ್ಲಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ., ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಸಂಪ್ಯಾಡಿ, ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.