ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಪುತ್ತೂರು ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಲಯನ್ಸ್ ಅಧ್ಯಕ್ಷ ಲಯನ್ ಆನಂದ ಪೂಜಾರಿ ಯವರು ರೂ. 10,000 ರೂಪಾಯಿ ಚೆಕ್ ನ್ನು ಆಶ್ರಮದ ಮುಖ್ಯಸ್ಥರಾದ ಅಣ್ಣಪ್ಪ ವಿ ಎಂ ರವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಕ್ಲಬ್ಬಿನ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ಆಹಾರವನ್ನು ಆಶ್ರಮದ ಸದಸ್ಯರೊಂದಿಗೆ ಸೇವಿಸಿದರು.ಲಯನ್ಸ್ ವಲಯ ಸಲಹೆಗಾರರಾದ ಲಯನ್ ಗಂಗಾಧರ್ ರೈ,ಕಾರ್ಯದರ್ಶಿ ಲಯನ್ ರಮಿತಾ ಜಯರಾಮ್,2 ನೇ ಉಪಾಧ್ಯಕ್ಷ ಲಯನ್ ವೀರಪ್ಪ ಗೌಡ ಕಣ್ಣ್ಕಲ್,3 ನೇ ಉಪಾಧ್ಯಕ್ಷ ಲಯನ್ ರಾಮಕೃಷ್ಣ ರೈ, ಸದಸ್ಯೆ ಲಯನ್ ಸುಷ್ಮಾ ಆನಂದ್ ರವರು ಉಪಸ್ಥಿತರಿದ್ದರು.